ಹೊನ್ನಾವರ : ತಾಲೂಕಿನಲ್ಲಿ ಈ ಹಿಂದೆ ಉಪನೋಂದಣಾಧಿಕಾರಿ ಆಗಿದ್ದ, ಹಾಗೂ ತಮ್ಮ ವಿಭಿನ್ನವಾದ ಸಹಿಯ ಮೂಲಕವೇ ಹೆಸರಾಗಿದ್ದ ಶಾಂತಯ್ಯ ಅವರು ಕೊನೆಯುಸಿರೆಳೆದ ಬಗ್ಗೆ ವರದಿಯಾಗಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ಇವರು ಒಂದು ವರ್ಷದ ಹಿಂದೆ ನಿವೃತ್ತರಾಗಿದ್ದರು.

ಕಲಾತ್ಮಕವಾಗಿ ಸಹಿ ಹಾಕುವ ಮೂಲಕ ಪ್ರಸಿದ್ಧಿ ಪಡೆದಿದ್ದ ನೆಲಮಂಗಲ ತಾಲೂಕಿನ ಕಂಬಾಳು ಗ್ರಾಮದ ನಿವಾಸಿ ನಿವೃತ್ತ ಉಪನೋಂದಣಾಧಿಕಾರಿ ಶಾಂತಯ್ಯ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಶಾಂತಯ್ಯ ಕೊನೆಯುಸಿರೆಳೆದಿದ್ದಾರೆ. ಗುರುವಾರ ಸ್ವಗ್ರಾಮದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಲಾಯಿತು.

1 ವರ್ಷದ ಹಿಂದೆ ನಿವೃತ್ತರಾಗಿದ್ದರು. ಅವರು ಒಂದು ನಿಮಿಷ ತೆಗೆದುಕೊಂಡು ಯಾರೂ ನಕಲು ಮಾಡಲಾಗದಂತಹ ಕಲಾತ್ಮಕ ಸಹಿ ಹಾಕುತ್ತಿದ್ದರು. ಅವರ ಸಹಿಯನ್ನು ಮೆಚ್ಚಿದ ಹೈಕೋರ್ಟ್​ ನ್ಯಾಯಾಧೀಶರೊಬ್ಬರು ಅವರನ್ನು ಗೌರವಿಸಿದ್ದರು.

ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಅವರು, ತಮ್ಮ ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.