ಶಿರಸಿ: ತಾಲೂಕಿನ ಬನವಾಸಿಯಲ್ಲಿ ವ್ಯಕ್ತಿಯೋರ್ವ ಇಬ್ಬರಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ವಿವಾಹಿತೆಯನ್ನು ಪ್ರೀತಿಸುತ್ತಿರುವ ಬಗ್ಗೆ ಕೇಳಿದ್ದಕ್ಕೆ ವ್ಯಕ್ತಿ ಈ ರೀತಿಯ ಹಲ್ಲೆ ನಡೆಸಿದ್ದಾನೆ ಎಂಬುದಾಗಿ ವರದಿಯಾಗಿದೆ. ಮನ್ಸೂರ್ ಅಬ್ದುಲ್ ಕರೀಂ ಶೇಕ್ ಹಲ್ಲೆ ನಡೆಸಿದ ವ್ಯಕ್ತಿಯಾಗಿದ್ದಾನೆ.

ವಿವಾಹಿತೆಯ ಸಹೋದರರಾದ ನದೀಂ ಮತ್ತು ಇಬ್ರಾಹಿಂ ಗಾಯಗೊಂಡಿದ್ದಾರೆ. ವಿವಾಹ ಆದ ಬಳಿಕವೂ ಮನ್ಸೂರ್ ಆಕೆಯೊಂದಿಗೆ ಪ್ರೀತಿ ಹೊಂದಿದ್ದ. ಈ ವಿಷಯಕ್ಕೆ ಸಂಬಂಧಿಸಿ ಹಲವು ಬಾರಿ ಮಾತು ಚಕಮಕಿ ಆಗಿತ್ತು. ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸುವ ಸಲುವಾಗಿ ಬನವಾಸಿಯ ಅಹ್ಲೆ ಸುನ್ನತ್ ಜಮಾತ್ ಕಾರ್ಯದರ್ಶಿ ಅಷ್ಪಾಕ್ ಅಲಿ ಮನೆಯಲ್ಲಿ ಶುಕ್ರವಾರ ಸಭೆ ನಡೆಸಲಾಗಿತ್ತು.

ಈ ಸಂದರ್ಭದಲ್ಲಿ ಸೇರಿದ್ದ ಜಮಾತಿನ ಮುಂದೆಯೇ ನದೀಂ ಮತ್ತು ಮನ್ಸೂರ್ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಮನ್ಸೂರ್ ಇಬ್ರಾಹಿಂ ನು ನದೀಂಗೆ ಗುದ್ದಿ ಹಲ್ಲೆ ನಡೆಸಿದ್ದಾನಲ್ಲದೇ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಕೈ ಮತ್ತು ಭುಜಕ್ಕೆ ಹಲವಾರು ಬಾರಿ ಚುಚ್ಚಿದ್ದಾನೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  “ರಾತ್ರಿರಾಣಿ” ಪಾರಿಜಾತ ಗಿಡದ ಮಹತ್ವದ ಕುರಿತು ಒಂದಿಷ್ಟು ಮಾಹಿತಿ..!!