ಅಂಕೋಲಾ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಬಾಳೆಗುಳಿಯಿಂದ ಯಲ್ಲಾಪುರ ಮಾರ್ಗಮದ್ಯೆ ಕಂಚಿನಬಾಗಿಲ ಬಳಿ ಕಿರು ಸೇತುವೆಯಂಚಿನ ರಸ್ತೆ ಕುಸಿತವಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ ಎಂದುತಿಳಿದುಬಂದಿದೆ.

ಇಡೀ ರಾತ್ರಿ ಸುರಿದ ಮಳೆಯಲ್ಲಿ ರಸ್ತೆಯ ಪಿಚ್ಚಿಂಗ್ ಕಿತ್ತುಹೋಗಿ ರಸ್ತೆ ಕುಸಿದಿದ್ದು ರಾಷ್ಟ್ರಿಯ ಹೆದ್ದಾರಿಯಲ್ಲಿ 2 ಮೀಟರಿನಷ್ಟು ಅಗಲದ ಹೊಂಡ ಬಿದ್ದಿದೆ. ಒಂದು ದಿನಕ್ಕೆ
ಸುಮಾರು 20 ಸಾವಿರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದು, ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ.

RELATED ARTICLES  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಡಿಡಿಪಿಐ ಹರ್ಷ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉ.ಕನ್ನಡ
ವಿಭಾಗದ ಕಿರಿಯ ಅಭಿಯಂತರ ಪಿ.ಕೆ.ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸದ್ಯ ಮಳೆ ಬೀಳುತ್ತಿದ್ದು ಪಾಲಿಥಿನ್ ಶೀಟಿನ ಹೊದಿಕೆಯನ್ನು ಹಾಕಿ ಮಳೆಯಿಂದ
ಇನ್ನೂ ಕುಸಿಯದಂತೆ ರಕ್ಷಣೆ ನೀಡಲಾಗುವದು ಮತ್ತು ಪರಿಣಿತರು ಸ್ಥಳ ಪರೀಕ್ಷೆ ನಡೆಸಿ ತುರ್ತು ದುರಸ್ತಿ ಕಾಮಗಾರಿ ನಡೆಸಲಾಗುವದು ಎಂದಿದ್ದಾರೆ.

ರಸ್ತೆ ಕುಸಿತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಸಂತೋಷ ಶೆಟ್ಟಿ ವಾಹನಗಳ ಸಂಚಾರಕ್ಕೆ ಯಾವುದೇ ತೊಡಕಾಗದಂತೆ ಹೆದ್ದಾರಿ ಒಂದು ಬದಿಯಿಂದ ಮಾತ್ರ ವಾಹನಗಳು ಸಂಚರಿಸಲು. ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಮಳೆಯಲ್ಲಿಯೂ ಪೊಲೀಸ್ ಸಿಬ್ಬಂದಿಗಳು ವಾಹನಗಳ ಸುಗಮ ಸಂಚಾರಕ್ಕೆ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES  ಕುಮಟಾಕ್ಕೆ ಬರಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳ ಮೌಲ್ಯ ಮಾಪನ ಕೇಂದ್ರ: ಕೇಳಿ ಬಂತು ಒತ್ತಾಯ

ಈ ಹೆದ್ದಾರಿಯಲ್ಲಿ ಮಲ್ಟಿ ಎಕ್ಸೆಲನ ಭಾರೀ ವಾಹನಗಳು ಸಂಚರಿಸುವದರಿಂದ ಸೂಕ್ತ ನಿಗಾ ವಹಿಸಲಾಗುತ್ತಿದೆ. ಸೇತುವೆಯ ಬಳಿಯ ರಸ್ತೆಯ ಮೇಲೆ ಬಹಳಷ್ಟು ಹೊಂಡಗಳಿದ್ದು ಸದ್ಯ ಜೆಸಿಬಿ ಬಳಸಿ ಜಲ್ಲಿಕಲ್ಲು ಮತ್ತಿತರ ಸಾಮಗ್ರಿಗಳನ್ನು ಬಳಸಿ ಹೊಂಡಗಳನ್ನು
ಮುಚ್ಚಲಾಗುತ್ತಿದೆ ಎಂದು ವರದಿಯಾಗಿದೆ.