ಸಿದ್ದಾಪುರ : ತಾಲೂಕಿನ ಕಾನಗೋಡಿನಲ್ಲಿ ವ್ಯಕ್ತಿಯೊಬ್ಬ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿ ನಂತರದಲ್ಲಿ ತಾನೂ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ಇಡೀ ಉತ್ತರಕನ್ನಡದ ಜನರನ್ನೇ ಬೆಚ್ಚಿ ಬೀಳಿಸಿದೆ. ವಿಪರೀತ ಸಾರಾಯಿ ಕುಡಿದು ಮನೆಗೆ ಬಂದ ಪತಿರಾಯ ಈ ಕೃತ್ಯ ನಡೆಸಿದ ಬಗ್ಗೆ ವರದಿಯಾಗಿದೆ.

ಕಾನಗೋಡ ಗ್ರಾಮದ ಗಣೇಶನಗರದ ಗುತ್ಯ ಸಣ್ಯಾ ಚೆನ್ನಯ್ಯ ಎಂಬಾತ ವಿಪರೀತ ಸರಾಯಿ ಕುಡಿದು ಬಂದು ಮನೆಯಲ್ಲಿದ್ದ ತನ್ನ ಹೆಂಡತಿಯೊಂದಿಗೆ ಜಗಳ ಮಾಡಿ ಕುಡಿದ ಅಮಲಿನಲ್ಲಿ ಪತ್ನಿ ರೇಣುಕಾ ಗುತ್ಯಾ ಚೆನ್ನಯ್ಯ ಇವಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ಇದರಿಂದ ಆಕೆಯ ಎದೆಯ ಎಡ ಭಾಗ ಕೈಕಾಲು ಸುಟ್ಟು ತೀವ್ರತರದ ಗಾಯವಾಗಿದ್ದು 108 ವಾಹನದ ಮೂಲಕ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES  ಪ್ರತಿಭಟನೆಯ ವೇಳೆ ಕುಸಿದ ಮಹಿಳೆ: ಹಾರಿ ಹೋಯ್ತು ಪ್ರಾಣ ಪಕ್ಷಿ..!

ಹೆಂಡತಿಯನ್ನು ಆಸ್ಪತ್ರೆಗೆ ಒಯ್ಯುತ್ತಿದ್ದಂತೆ ತಾನು ಸಹ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದು ಸ್ಥಳೀಯರು ಖಾಸಗಿ ವಾಹನದ ಮೂಲಕ ಈತನನ್ನು ಸಹ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಗುತ್ಯಾ ಚೆನ್ನಯ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಘಟನೆ ಬಗ್ಗೆ ತನಿಖೆ ನಡೆದಿದೆ ಎನ್ನಲಾಗಿದೆ.

RELATED ARTICLES  ಕುಮಟಾ ರೈಲ್ವೆ ನಿಲ್ದಾಣಕ್ಕೆ ಶಾಸಕರ ಭೇಟಿ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ದಿನಕರ ಶೆಟ್ಟಿ