ಕುಮಟಾ: ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಬೇಡಿಕೆಯ ಜೊತೆಗೆ ಕುಮಟಾ ತಾಲೂಕಿನಲ್ಲಿ ಜನರ ಜೀವ ಉಳಿಸಲು ಮುಖ್ಯವಾಗಿರುವ ಟ್ರಾಮಾ ಸೆಂಟರ್ ಶೀಘ್ರದಲ್ಲಿ ನಿರ್ಮಾಣ ಮಾಡಬೇಕೆಂದು ಒತ್ತಾಯ ಕೇಳಿಬಂದಿತ್ತು.
ಜನ ಸಾಮಾನ್ಯರ ಹಲವು ವರ್ಷಗಳ ಬೇಡಿಕೆಗಳಲ್ಲಿ ಇದು ಒಂದು ಅತಿ ಮುಖ್ಯ ಬೇಡಿಕೆಯಾಗಿತ್ತು.ಎರಡು ವರ್ಷಗಳ ಹಿಂದೆ ಟ್ರಾಮಾ ಸೆಂಟರ್ ಅತಿ ಶೀಘ್ರವಾಗಿ ನಿರ್ಮಾಣ ಮಾಡುವಂತೆ ತಾಲೂಕಿನ ಜನರು ತಮ್ಮ ಬೇಡಿಕೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಶಾಸಕ ದಿನಕರ ಶೆಟ್ಟಿಯವರಿಗೆ ಬೇಡಿಕೆಯಿಟ್ಟಿದ್ದರು.ಶಾಸಕರ ಗಮನಕ್ಕೆ ಈ ವಿಷಯ ಬರುತ್ತಿದ್ದಂತೆಯೇ ತಾಲೂಕಿನ ಜನರಿಗೆ ಸದ್ಯದಲ್ಲೇ ಟ್ರಾಮಾಸೆಂಟರ್ ನಿರ್ಮಾಣ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಶಾಸಕರ ಸತತ ಪ್ರಯತ್ನ ಮತ್ತು ತಾಲೂಕಿನ ಜನರ ಸತತ ಬೇಡಿಕೆಯ ಫಲವಾಗಿ ಕುಮಟಾ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ ನಿರ್ಮಾಣವಾಗಲಿದೆ.

ಈ ಕುರಿತಾಗಿ ಬಿ.ಈ.ಎಲ್ (Bharath Electronics Limited) ಸಂಸ್ಥೆಯೊಡನೆ ಮತ್ತು ಮುಖ್ಯಮಂತ್ರಿಗಳೊಡನೆ ಶಾಸಕ ದಿನಕರ ಶೆಟ್ಟಿ ನಿರಂತರ ಸಂಪರ್ಕದಲ್ಲಿದ್ದು ತಾಲೂಕಿನಲ್ಲಿ ಆಗುವ ಅಪಘಾತಗಳ ಬಗ್ಗೆ ಮತ್ತು ರಸ್ತೆಯಲ್ಲಿ ಜನರು ಜೀವ ಕಳೆದುಕೊಳ್ಳುತ್ತಿರುವುದರ ಬಗ್ಗೆ ಮನವರಿಕೆ ಮಾಡಿದ್ದರು.

RELATED ARTICLES  ಕಾರವಾರ: ಹಿಂದೂ ಯುವಕರನ್ನು ಟಾರ್ಗೆಟ್ ಮಾಡಿದರೆ ಹುಷಾರ್..!

ಅದರಂತೆಯೇ ಇಂದು ಕುಮಟಾಕ್ಕೆ ಆಗಮಿಸಿದ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಸಂಸ್ಥೆಯ ಜನರಲ್ ಮೆನೇಜರ್ ಡಾ.ಗುರುರಾಜ ಹಾಗೂ ಡಾ. ಶಶಿಭೂಷಣ ಅವರು ಟ್ರಾಮಾಸೆಂಟರ್ ಮಂಜೂರಾತಿ ಪತ್ರವನ್ನು ಶಾಸಕರ ಮುಖಾಂತರ ತಾಲೂಕಾ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಗಣೇಶ ನಾಯ್ಕ ಅವರಿಗೆ ಹಸ್ತಾಂತರಿಸಿದ್ದಾರೆ.
ಸಿ. ಎಸ್. ಆರ್ ಫಂಡ್ ನಿಂದ 2.73 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸ್ಪೆಷಲ್ ಕ್ಯಾಶುಯಲ್ಟಿ ಅರ್ಥೋಪೇಡಿಕ್ ಟ್ರಾಮಾ ಸೆಂಟರ್ ಇದಾಗಿದ್ದು, ಹೆಚ್ಚುವರಿ ಬೆಡ್ ಗಳು ,ಯೂರಿನ್ ಅನಾಲಿಸಿಸ್ ಯಂತ್ರ ಸೇರಿದಂತೆ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕೆಲವು ಅತ್ಯಾದುನಿಕ ಸೌಲಭ್ಯಗಳು ಸಿಗಲಿದೆ.

ತಾಲೂಕು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡದ ರೂಪುರೇಷೆಗಳ ಬಗ್ಗೆ ತಾಲೂಕಾ ವೈದ್ಯಾಧಿಕಾರಿಗಳು ಶಾಸಕರೊಡನೆ ಚರ್ಚಿಸಿದರು. ಈ ಕುರಿತು ಶಾಸಕ ದಿನಕರ ಶೆಟ್ಟಿ ಸೂಕ್ತ ಸಲಹೆಸೂಚನೆಗಳನ್ನು ನೀಡಿದರು.

ಕುಮಟಾ ಹೊನ್ನಾವರ ಕ್ಷೇತ್ರದ ಜನರಿಗೆ ಅತ್ಯಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿರುವ ಶಾಸಕ ದಿನಕರ ಶೆಟ್ಟಿಯವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಶೀಘ್ರವಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಲಿ ಎಂಬುವುದು ತಾಲೂಕಿನ ಜನರ ಆಶಯವಾಗಿದೆ.

RELATED ARTICLES  ಪೊಲೀಸ್ ಸಬ್ ಇನ್ಸೆಪೆಕ್ಟರ್‌ ಪರೀಕ್ಷೆಯಲ್ಲಿ ಸಾಧನೆಯೊಂದಿಗೆ ಆಯ್ಕೆಯಾದ ಹಿರೇಗುತ್ತಿಯ ಪ್ರಜ್ವಲ ನಾಯಕ.

ಟ್ರಾಮಾ ಸೆಂಟರ್ ಎಂದರೆ ಏನು?

ದೈಹಿಕ ಗಾಯಗಳಿಗೆ ತುರ್ತು ಚಿಕಿತ್ಸೆ ನೀಡುವ ಆಸ್ಪತ್ರೆ.
ಇಲ್ಲಿ ಎತ್ತರದಿಂದ ಬೀಳುವುದು, ಮೋಟಾರು ವಾಹನಗಳ ಘರ್ಷಣೆಗಳು ಅಥವಾ ಗುಂಡೇಟಿನ ಗಾಯಗಳಂತಹ ಪ್ರಮುಖ ಆಘಾತಕಾರಿ ಗಾಯಗಳಿಂದ ಬಳಲುತ್ತಿರುವ ರೋಗಿಗಳಿಗೆ ಆರೈಕೆಯನ್ನು ಒದಗಿಸಲು ಸುಸಜ್ಜಿತ ಅತ್ಯಾದುನಿಕ ಉಪಕರಣ ಮತ್ತು ಸಿಬ್ಬಂದಿಗಳು‌ ಇಲ್ಲಿ ಇರುತ್ತಾರೆ.

ಟ್ರಾಮಾ ಸೆಂಟರ್‌ನ ಕೆಲಸವೇನು?

ತಕ್ಷಣದ ಬದುಕುಳಿಯುವಿಕೆ ಸಮಸ್ಯೆಯಿರುವ ತೀವ್ರತರವಾದ ಪ್ರಕರಣಗಳಿಗೆ ಟ್ರಾಮಾ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆಘಾತಕಾರಿ ಗಾಯಗಳಿಗೆ ಚಿಕಿತ್ಸೆ ನೀಡುವಲ್ಲಿ ಹೆಚ್ಚು ಪರಿಣಿತ ಶಸ್ತ್ರಚಿಕಿತ್ಸಕರು ಅಲ್ಲಿ ಕೆಲಸ ಮಾಡುತ್ತಾರೆ ಮತ್ತು ಅಲ್ಲಿಗೆ ಬಂದ ರೋಗಿಯನ್ನು ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸಲು ಅತ್ಯಾಧುನಿಕ ಉಪಕರಣಗಳನ್ನು ಬಳಸುತ್ತಾರೆ.