ಕಾರವಾರ : ಇಳಿ ವಯಸ್ಸಿನ ಇಳಿವಯಸ್ಸಿನ ವ್ಯಕ್ತಿಯೊಬ್ಬ ಹದಿನಾರರ ಯುವತಿಯನ್ನು ಮದುವೆಯಾಗಲು ಹೊರಟಿದ್ದ, ಇದೀಗ ಪೊಲೀಸರ ಬಲಗೆ ಬಿದ್ದಿದ್ದು ಬಂಧಿಸಲಾಗಿದೆ.
ನಗರದ 52 ವರ್ಷದ ಸೆಕ್ಯೂರಿಟಿ ಗಾರ್ಡ್ ಒಬ್ಬ 16 ವರ್ಷದ ಅಪ್ರಾಪ್ತ ಹುಡುಗಿಯನ್ನು ವರಿಸಲು ಹೊರಟಿದ್ದ. ಈ ಮದುವೆ ಕುರಿತು ಅಂಗನವಾಡಿ ಕಾರ್ಯಕರ್ತೆಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಇದೀಗ ಮದುವೆಯಾಗಲು ಹೊರಟ ಸೆಕ್ಯೂರಿಟಿ ಗಾರ್ಡ್ ನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

RELATED ARTICLES  ಉಪಕಾರ ಮಾಡಿದವರಿಗೆ ಸರಕಾರವೇ ನೀಡುತ್ತೆ 5 ಸಾವಿರ ರೂ. ಬಹುಮಾನ..!

ವ್ಯಕ್ತಿ ಬಂಧನಕ್ಕೊಳಗಾಗುವ ಭಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎನ್ನಲಾಗಿದ್ದು, ಆತನಿಗೆ ಈ ಕುರಿತು ಕಾನೂನಿನ ಅರಿವಿಲ್ಲ ಎನ್ನಲಾಗಿದೆ.

ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಜಿಲ್ಲಾ ಕಾರಾಗೃಹಕ್ಕೆ ಸೇರಿಸಲಾಗಿದೆ. ವಧು-ವರರು ಇಬ್ಬರೂ ಕಾರವಾರ ನಗರದವರೇ ಆಗಿದ್ದಾರೆ. ಮಾಲಾದೇವಿ ಮೈದಾನದ ವಿಠೋಬ ದೇವಸ್ಥಾನದಲ್ಲಿ ಮದುವೆ ಅಪಾರ ಸಾರ್ವಜನಿಕರ, ಬಂಧು ಬಳಗದವರ ನಡುವೆಯೇ ನಡೆದಿತ್ತು ಎನ್ನಲಾಗಿದೆ.

RELATED ARTICLES  ಇಂದು ಉತ್ತರಕನ್ನಡ ಜಿಲ್ಲೆಯಲ್ಲಿ 309 ಜನರಲ್ಲಿ ಪಾಸಿಟಿವ್..!

ಬಂಧು ಬಳಗದವರು ವಧುವನ್ನು ನೋಡಿದರೆ ಸುಮಾರು 25 ರ ವಯೋಮಾನದವರಂತೆ ಕಾಣುತ್ತಾರೆ ಎಂಬ ಅಭಿಪ್ರಾಯ ತೋಡಿಕೊಂಡಿದ್ದಾರೆ. ಪೊಲೀಸ್ ತನಿಖೆ‌ ಮುಂದುವರೆಸಿದ್ದಾರೆ.