ಕಾರವಾರ: ನಗರದ ಮಾಲಾದೇವಿ ಮೈದಾನದ
ಹತ್ತಿರದ ಚರಂಡಿಗೆ ಬಿದ್ದಿದ್ದ ಹಸುವೊಂದನ್ನು
ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿದ್ದಾರೆ ಎಂದು ತಿಳಿದುಬಂದಿದೆ.
ನಗರದ ಕೋಡಿಭಾಗ ರಸ್ತೆಗೆ ಹೊಂದಿಕೊಂಡಂತೆ
ಇರುವ ಮಾಲಾದೇವಿ ಮೈದಾನದ ಬದಿಯಲ್ಲಿ
ಚರಂಡಿಗೆ ಹಾಕಲಾಗಿದ್ದ ಕಾಂಕ್ರಿಟ್ ಸ್ಲಾಬ್ ಗಳು
ಕುಸಿದಿವೆ. ಸ್ಲಾಬ್ ಗಳ ಮೇಲೆ ನಡೆದುಕೊಂಡು ಬರುತ್ತಿದ್ದ ಹಸುವೊಂದು ಇದೇ ವೇಳೆ ಸ್ಲಾಬ್ ಗಳ ಮದ್ಯೆ ಇರುವ ರಂಧ್ರದಲ್ಲಿ ಕಾಲು ಸಿಲುಕಿಕೊಂಡಿದೆ ಎನ್ನಲಾಗಿದೆ.
ಆ ಬಳಿಕ ಒದ್ದಾಡುವಾಗ ಸ್ಲಾಬ್ ಕುಸಿದು, ಅದರೊಂದಿಗೆ ಹಸುವೂ ಕಿರಿದಾದ ಚರಂಡಿಯಲ್ಲಿ ಬಿದ್ದಿದೆ. ತೀರ ಚಿಕ್ಕಜಾಗದಲ್ಲಿ ಬಿದ್ದು ಒದ್ದಾಡುವಾಗ ಮೈದಾನದಲ್ಲಿ ಆಟವಾಡುತ್ತಿದ್ದ ಯುವಕರು ಗಮನಿಸಿದ್ದಾರೆ, ನಂತರ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು, ಕಾಂಕ್ರಿಟ್ ಸ್ಲಾಬ್‌ನ್ನು ಒಡೆದು ತೆಗೆದು, ಅದರ ಕಬ್ಬಿಣದ ರಾಡ್‌ಗಳನ್ನು ಕಟರ್‌ನಿಂದ ಬೇರ್ಪಡಿಸಿ, ಹಸುವಿನ ಕಾಲನ್ನು ಅದರಿಂದ ಹೊರಕ್ಕೆ ತೆಗೆದಿದ್ದಾರೆ,ಬಳಿಕ ಹಸುವನ್ನು ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ.