ಕುಮಟಾ : ತಾಲೂಕಿನ ಹನೇಹಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಕಡಿಮೆ ಗ್ರಾಮದ ನಿವಾಸಿಯಾಗಿದ್ದ ಸಂದೀಪ್ ಆಗೇರ ಎನ್ನುವ ವ್ಯಕ್ತಿ ಇತ್ತೀಚೆಗೆ ಯಲ್ಲಾಪುರ ತಾಲೂಕಿನ ಸೇತುವೆಯೊಂದರಮೇಲೆ ತೆರಳುತ್ತಿದ್ದಾಗ ಪ್ರವಾಹದ ನೀರಿಗೆ ಸಿಲುಕಿ ಲಾರಿಸಮೇತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದನು. ಬಡ ಕೂಲಿಕಾರ್ಮಿಕನಾಗಿದ್ದ ಸಂದೀಪ್ ಆಗೇರನನ್ನು ಕಳೆದುಕೊಂಡಿದ್ದ ಮಡದಿ ಆಶಾ ಆಗೇರ ಹಾಗೂ ಇಬ್ಬರು ಚಿಕ್ಕ ಮಕ್ಕಳ ಜೀವನ ದುಸ್ಥರವಾಗಿತ್ತು.

RELATED ARTICLES  "ಈಗ ಮೊಬೈಲ್ ಖರೀದಿಸಿ ನಂತರ ಹಣ ಪಾವತಿಸಿ" ಅಮೆಜಾನ್ ನ ಈ ಆಫರ್ ಗೆ ಬಿಗ್ ರೆಸ್ಪಾನ್ಸ? ನೀವೂ ಪಡೆಯಿರಿ ಮೊಬೈಲ್.

ಶಾಸಕ ದಿನಕರ ಶೆಟ್ಟಿಯವರು ಇಂದು ಸಂದೀಪ್ ಆಗೇರನ ಮನೆಗೆತೆರಳಿ ಸಾಂತ್ವನ ಹೇಳುವುದರ ಜೊತೆಗೆ, ಆತನ ಕುಟುಂಬಕ್ಕೆ ಪ್ರಕೃತಿ ವಿಕೋಪದಿಂದ ಮಾನವನ ಪ್ರಾಣಹಾನಿಯಾದುದರ ಹಿನ್ನೆಲೆಯಲ್ಲಿ ಸರ್ಕಾರದಿಂದ ಪರಿಹಾರದ ಧನವಾಗಿ 5,00,000 ರೂಪಾಯಿಗಳ ಚೆಕ್ ಹಸ್ತಾಂತರಿಸಿದ್ದಾರೆ.

RELATED ARTICLES  ರಿಕ್ಷಾ ಬಡಿದು ಪಾದಾಚಾರಿ ಸಾವು : ಕುಮಟಾದ ಗುಡೇಅಂಗಡಿಯಲ್ಲಿ ಘಟನೆ.

ಈ ಸಂದರ್ಭದಲ್ಲಿ ಕುಮಟಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ, ಹನೇಹಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷೆ ಭಾರತಿ ಗೌಡ , ಉಪಾಧ್ಯಕ್ಷ ಭರತ್ ಗಾಂವಕರ , ತಾ. ಪಂ. ಮಾಜಿ ಸದಸ್ಯ ಮಹೇಶ ಶೆಟ್ಟಿ, ಮಹಾಶಕ್ತಿಕೇಂದ್ರದ ಅಧ್ಯಕ್ಷ ಚಂದ್ರಶೇಖರ ನಾಯ್ಕ್, ಗೋಕರ್ಣ ಸಿ. ಪಿ. ಐ. ವಸಂತ ಆಚಾರಿ ಜೊತೆಗಿದ್ದರು.