ಕುಮಟಾ : ನ್ಯಾಯಬೆಲೆ ಅಂಗಡಿಯಲ್ಲಿ ಈಗಾಗಲೇ ಜಾರಿಗೆ ತಂದಿರುವ ಬಯೋಮೆಟ್ರಿಕ್ ವ್ಯವಸ್ಥೆಯನ್ನು ರದ್ದುಗೊಳಿಸಿ ರೇಷನ್ ವಿತರಣೆಯನ್ನು ಸರಳಿಕರಣ ಮಾಡುವಂತೆ ಆಗ್ರಹಿಸಿ ಕುಮಟಾ ತಾಲೂಕಾ ಜೆ.ಡಿ.ಎಸ್ ಪಕ್ಷದ ವತಿಯಿಂದ ಕುಮಟಾ ತಹಸಿಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ನಮ್ಮ ತಾಲೂಕಿನಲ್ಲಿ ಹೆಚ್ಚಿನ ಸಾರ್ವಜನಿಕರು ರೆಷನ್ ಪಡೆಯಲು ಪರದಾಡುತ್ತಿದ್ದಾರೆ. ಅಲ್ಲದೆ ಹೆಚ್ಚಿನ ನ್ಯಾಯಬೆಲೆ ಅಂಗಡಿಗಳು ಗ್ರಾಮೀಣ ಪ್ರದೇಶದಲ್ಲಿರುವುದರಿಂದ ಇಂಟರ್ನೆಟ್ ಸಂಪರ್ಕದ ಸಮಸ್ಯೆ ಕಾಡುತ್ತಿದೆ. ಮತ್ತು ತಂತ್ರಾಂಶ ಅಳವಡಿಸಿದ ಸರ್ವರ್ ಜಿಲ್ಲೆಗೆ ಒಂದೇ ಆಗಿರುವುದರಿಂದ,ಬೆರಳಚ್ಚು ತೆಗೆದುಕೊಳ್ಳುವ ವಿಧಾನ ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಎಲ್ಲಾ ಕಾರಣದಿಂದ ವ್ಯವಸ್ಥೆಯನ್ನು ಸರಳಿಕರಣ ಮಾಡಬೇಕು ಎಂದು ಮನವಿ ಮಾಡಿದ್ರು. ಈ ವೇಳೆ ಮಾತನಾಡಿದ ಕುಮಟಾ ಜೆ,ಡಿ,ಎಸ್ ಉಸ್ತುವಾರಿ.ಜಿ.ಪಂಚಾಯತ ಸದಸ್ಯ ಪ್ರದೀಪ ನಾಯಕ ಸರಕಾರದ ಭಾಗ್ಯ ಯೋಜನೆಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ, ಪ್ರಚಾರಕ್ಕಾಗಿ ಭಾಗ್ಯ ಯೋಜನೆಗಳನ್ನು ತರಲಾಗಿದೆ. ಮುಂದಿನ ದಿನದಲ್ಲಿ ಜನರು ನ್ಯಾಯಬೆಲೆ ಅಂಗಡಿಯನ್ನು ಒಡೆದು ರೇಷನ್ ತರುವ ಸ್ಥಿತಿ ಉಂಟಾದರೆ ಅದಕ್ಕೆ ಸರಕಾರವೇ ಹೊಣೆ. ಮತ್ತು ನಮ್ಮ ಪಕ್ಷ ಕೂಡ ಉಗ್ರಪ್ರತಿಭಟನೆ ಮಾಡುತ್ತೆ ಎಂದರು.

RELATED ARTICLES  ಕುಮಟಾದಲ್ಲಿ ದೇವಾಲಯಕ್ಕೆ ಕನ್ನ ಹಾಕಿದ ಚೋರರು : ದೇವಕಿ ಕೃಷ್ಣ ದೇವಸ್ಥಾನ ದಲ್ಲಿ ಕಳ್ಳತನ.

ನಂತರ ಜೆ,ಡಿ.ಎಸ್ ಕಾರ್ಯಕರ್ತರು ಕುಮಟಾ ಸಹಾಯಕ ಕಚೇರಿಗೆ ತೆರಳಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ರು.

ಈ ವೇಳೆ ಜೆ,ಡಿ,ಎಸ್ ತಾಲೂಕಾಧ್ಯಕ್ಷ ಮಂಜುನಾಥ ಪಟಗಾರ,ರಾಜೇಶ ನಾಯಕ,ಭಾಸ್ಕರ ಪಟಗಾರ,ವಿಜಯ ಪಟಗಾರ,ಗೀತಾ ಮುಕ್ರಿ,ಮಾಲತಿ ಹೆಗಡೆ ಸೇರಿದಂತೆ ಅನೇಕ ಜೆ,ಡಿ,ಎಸ್ ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು..

RELATED ARTICLES  ಮತಯಂತ್ರ ವೈಫಲ್ಯ ಹೊನ್ನಾವರದ ಮೂಡ್ಕಣಿಯಲ್ಲಿಯೂ ಮತದಾನಕ್ಕೆ ಒಂದು ಗಂಟೆ ವಿಳಂಬ.