ಭಟ್ಕಳ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜನತಾ ಸಂಯುಕ್ತ ಪ. ಪೂ. ಕಾಲೇಜು ಹಾಗೂ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಸಂಸ್ಥಾಪಕರ ದಿನಾಚರಣೆ ಹಾಗೂ ದಿನಕರ ದೇಸಾಯಿ ಸಂಸ್ಮರಣೆ ಕಾರ್ಯಕ್ರಮವು ಶಿರಾಲಿ ಜನತಾ ವಿದ್ಯಾಲಯದಲ್ಲಿ ಸಂಪನ್ನಗೊಂಡಿತು. ಕಾರ್ಯಕ್ರಮವನ್ನು ದೀಪಬೆಳಗಿ ಉದ್ಘಾಟಿಸಿದ ಪೂರ್ವ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಡಿ.ಜೆ.ಕಾಮತ್ ಮಾತನಾಡಿ ದಿನಕರ ದೇಸಾಯಿಯವರು ಸಾಹಿತಿ ಮಾತ್ರವಲ್ಲ ಸಂಸದರಾಗಿ, ಹೋರಾಟಗಾರರಾಗಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿಯೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅನೇಕರ ಬದುಕನ್ನೆ ಬೆಳಗಲು ಕಾರಣರಾಗಿದ್ದಾರೆ ಎಂದು ನುಡಿದರು. ಆಶಯ ನುಡಿಗಳನ್ನಾಡಿದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಆಶಯ ನುಡಿಗಳನ್ನಾಡಿ ನುಡಿದಂತೆ ನಡೆದ ಅಪರೂಪದ ವ್ಯಕ್ತಿತ್ವ. ಸಾಹಿತ್ಯ ಕ್ಷೇತ್ರದಲ್ಲಿ ಚುಟುಕು ಬ್ರಹ್ಮನಾಗಿ ನಾಲ್ಕು ಸಾಲುಗಳ ಚೌಕಟ್ಟಿನಲ್ಲಿ ಸಮಾಜದ ಎಲ್ಲ ಸ್ತರಗಳ ಕೂಲಂಕುಷ ವಿಶ್ಲೇಷಣೆ ಮಾಡಿದ್ದಾರೆ. ತಮ್ಮ ಶಿಕ್ಷಣ ಸಂಸ್ಥೆಗಳ ಮೂಲಕ ಸಹಸ್ರಾರು ವ್ಯಕ್ತಿಗಳ ಬಾಳಿಗೆ ನಿಜವಾದ ಅರ್ಥದಲ್ಲಿ ದಿನಕರನಾಗಿ ಬೆಳಕನ್ನು ಚೆಲ್ಲಿ ಇತಿಹಾಸ ಪುಟದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ನುಡಿದರು.

RELATED ARTICLES  ಸಾಕ ಬೇಕಾ ತಪರಾಕಿ ಸಿದ್ಧರಾಮಯ್ಯನವರೇ!! FB ಯಲ್ಲಿ ಅನಂತಕುಮಾರ್ ಬರಹ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಅಮೃತ ರಾಮರಥ ಮಾತನಾಡಿದರು. ಸಾಹಿತ್ಯ ಪರಿಷತ್ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಪ್ರಬಂಧ, ಭಾಷಣ ಹಾಗೂ ಗೀತಗಾಯನ ಸ್ಪರ್ಧೆಯ ಬಹುಮಾನವನ್ನು ಸಾಹಿತಿ ಮಾನಾಸುತ ವಿತರಿಸಿ ಸ್ವರಚಿತ ಚುಟುಕುಗಳನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಸಾಪ ನಿಕಟಪೂರ್ವ ಅಧ್ಯಕ್ಷ ಶಂಕರ ನಾಯ್ಕ ಹಾಗೂ ಎನ್.ಐ.ಟಿ.ಕೆ. ಪ್ರಾಧ್ಯಾಪಕ ಜೊರ ಗೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಸಾಹಿತಿ ಡಾ.ಆರ್.ವಿ.ಸರಾಫ್, ಬಾಲಮಂದಿರದ ಮುಖ್ಯ ಶಿಕ್ಷಕಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಚುಟುಕು ಗಾಯನ, ಗೀತಗಾಯನ ಹಾಗೂ ದಿನಕರ ದೇಸಾಯಿಯವರ ಬದುಕು ಸಾಧನೆಗಳ ಕುರಿತು ಮಾತನಾಡಿದರು. ಹಿರಿಯ ಸಾಹಿತಿ ನಾರಾಯಣ ಯಾಜಿ ಜನತಾ ವಿದ್ಯಾಲಯದ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಭಾಷೆಗೆ ಪ್ರತಿಶತ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವುದಾಗಿ ಘೊಷಿಸಿದರು. ಆರಂಭದಲ್ಲಿ ದಿನಕರ ದೇಸಾಯಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಉಪನ್ಯಾಸಕ ಹೊನ್ನಪ್ಪಯ್ಯ ಗುನಗ ಸ್ವಾಗತಿಸಿದರೆ ಮುಖ್ಯ ಶಿಕ್ಷಕಿ ಆಶಾ ಭಟ್ ವಂದಿಸಿದರು.ಟಿ.ಬಿ.ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

RELATED ARTICLES  ಅಂಕೋಲಾದಲ್ಲಿ ಕಳ್ಳರ ಕರಾಮತ್ತು : ಅಂದಾಜು 8.40 ಲಕ್ಷ ಮೌಲ್ಯದ ವಸ್ತುಗಳ ಕಳ್ಳತನ