ಕುಮಟಾ : ಸ್ಥಳೀಯ ವಿದ್ಯಾನಿಕೇತನ ಮೂರೂರು-ಕಲ್ಲಬ್ಬೆ ಸಂಸ್ಥೆಯ ಪ್ರಗತಿ ವಿದ್ಯಾಲಯದಲ್ಲಿ ಡಾ|| ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಪ್ರಯುಕ್ತ ‘ ಶಿಕ್ಷಕ ದಿನಾಚರಣೆ ‘ಯನ್ನು ದಿನಾಂಕ 10 /09/ 2022ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾನಿಕೇತನ ಸಂಸ್ಥೆಯ ವಾಹನ ವಿಭಾಗದ ಸಂಚಾಲಕರಾದ ಶ್ರೀ ಸುಬ್ರಾಯ ಭಟ್ಟ ಅವರು ಶಿಕ್ಷಕ ದಿನಾಚರಣೆಯ ಕುರಿತು ಶಿಕ್ಷಕರಿಗೆ ಶುಭಕೋರಿ ಮಾತನಾಡಿ, ಇಂದಿನ ಸಮಾಜದಲ್ಲಿ ಶಿಕ್ಷಕರ* *ಜವಾಬ್ದಾರಿ ಗುರುತರವಾದದ್ದು, ಇಂದಿನ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಬಿತ್ತಿ ರಾಷ್ಟ್ರದ ಸತ್ ಪ್ರಜೆಯಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಎಂದು ಶಿಕ್ಷಕರನ್ನು ಅಭಿನಂದಿಸಿದರು.

ವಿದ್ಯಾನಿಕೇತನ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀ ಆರ್.ಜಿ.ಭಟ್ಟ ಮಾತನಾಡಿ ಶಿಕ್ಷಕರು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಶಿಕ್ಷಕ ವೃತ್ತಿ ಸಮಾಜದ ಅತ್ಯಂತ ಗೌರವಯುತವಾದ ವೃತ್ತಿ. ಶಿಕ್ಷಕರು ಜ್ಞಾನವಂತರಾಗಿ, ಸನ್ನಡತೆಯಿಂದ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿ ವೃತ್ತಿಯ ಘನತೆ ಹೆಚ್ಚಿಸಬೇಕೆಂದು ಕರೆ ನೀಡಿದರು.

RELATED ARTICLES  ಯಕ್ಷಗಾನ ಕಲಾವಿದ ಹಡಿನಬಾಳು ಶ್ರೀಪಾದ ಹೆಗಡೆ ಇನ್ನಿಲ್ಲ.

“ಶಿಕ್ಷಕ ರಾಷ್ಟ ರಕ್ಷಕ ” ಕುರಿತು ನಿವೃತ್ತ ಪ್ರಾಚಾರ್ಯ ಪೊ. ರಾಘವೇಂದ್ರ ಭಟ್ಟ ಉಪನ್ಯಾಸ ನೀಡಿದರು. ಡಾ|| ರಾಧಾಕೃಷ್ಣನ್ ಅವರ ಮೇರು ವ್ಯಕ್ತಿತ್ವ, ವೃತ್ತಿ ಘನತೆ, ಅವರ ವಿದ್ಯಾರ್ಥಿ ಪ್ರೀತಿ, ಆದರ್ಶ ಗುಣಗಳನ್ನು ಸ್ಮರಿಸಿ, ಶಿಕ್ಷಕ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುವ ಕುರಿತು ಜಾಗೃತಿ ಮೂಡಿಸಿ, ಮಹಾನ್ ಕವಿಗಳು, ತತ್ವಜ್ಞಾನಿಗಳು, ಲೇಖಕರ ಜೀವನದ ಸಾರವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಂತೆ ಸಲಹೆ ನೀಡಿದರು.

ಪ್ರಾಚಾರ್ಯರಾದ ಶ್ರೀ ಜಿ.ಎಂ.ಭಟ್ಟ ಅವರು ಪ್ರಾಸ್ತಾವಿಕ ನುಡಿಯೊಂದಿಗೆ ಸರ್ವರನ್ನು ಸ್ವಾಗತಿಸಿದರು.

RELATED ARTICLES  ಊಟಕ್ಕೆ ಕುಳಿತಲ್ಲಿಯೇ ಕೊನೆಯುಸಿರೆಳೆದ ಮಹಿಳೆ.

ವಿದ್ಯಾನಿಕೇತನ ಸಂಸ್ಥೆಯ ಶಿಕ್ಷಣ ವಿಭಾಗದ ಸಂಚಾಲಕರಾದ ಶ್ರೀ ಟಿ.ಆರ್.ಜೋಶಿ ಅವರು ವಂದಿಸಿದರು.

ಇದೇ ಸಂದರ್ಭದಲ್ಲಿ ಪ್ರೊ.ಪಿ. ರಾಘವೇಂದ್ರ ಭಟ್ಟ ಅವರನ್ನು ವಿದ್ಯಾನಿಕೇತನ ಸಂಸ್ಥೆಯ ಪರವಾಗಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಟಿ.ಎಸ್.ಭಟ್ಟ ಸದಸ್ಯರಾದ ಶ್ರೀ ಆಯ್. ಪಿ. ಭಟ್ಟ. ಶ್ರೀ ಜಿ.ವಿ.ಹೆಗಡೆ, ಶ್ರೀ ಎಸ್.ವಿ.ಹೆಗಡೆ ಬದ್ರನ್, ಶ್ರೀಮತಿ ಪ್ರತಿಭಾ ಹೆಗಡೆ, ಪ್ರಗತಿ ಪಿ.ಯು.ಕಾಲೇಜಿನ ಪ್ರಾಚಾರ್ಯರಾದ ಶ್ರೀ ಜಿ.ಎಂ.ಭಟ್ಟ ಶಾಲಾ , ಮುಖ್ಯಾಧ್ಯಾಪಕರು, ಶಿಕ್ಷಕರು, ಉಪನ್ಯಾಸಕರು ಉಪಸ್ಥಿತರಿದ್ದರು.

ಉಪನ್ಯಾಸಕಿಯರಾದ ಶ್ರೀಮತಿ ತೇಜಾ ಭಟ್ಟ ಸುಶ್ರಾವ್ಯವಾಗಿ ಪ್ರಾರ್ಥನೆ ನೆರವೇರಿಸಿದರು. ಶ್ರೀಮತಿ ಗಾಯತ್ರಿ ಹೆಬ್ಬಾರ ಕಾರ್ಯಕ್ರಮ ನಿರೂಪಿಸಿದರು.