ಸಿದ್ದಾಪುರ: ಬೆಂಗಳೂರಿನಿಂದ ಪ್ರವಾಸಕ್ಕೆಂದು ಬಂದಿದ್ದ ವ್ಯಕ್ತಿಯೊಬ್ಬ ನೀರುಪಾಲಾದ ಘಟನೆಯೊಂದು ಸಿದ್ದಾಪುರ ತಾಲೂಕಿನ ಗುಂಡಿಗದ್ದೆ ಫಾಲ್ಸ್‌ನಲ್ಲಿ ಹತ್ತಿರ ನಡೆದಿದೆ ಎಂದು ತಿಳಿದುಬಂದಿದೆ. ತಂಡಾಗುಂಡಿ ಪಂಚಾಯ್ತಿ ವ್ಯಾಪ್ತಿಯ ಹುಕಳ್ಳಿ ಬಳಿಯ ಗುಂಡಿಗದ್ದೆ ಫಾಲ್ಸ್‌ನಲ್ಲಿ ಕೋಲಾರದ ರಾಘವೇಂದ್ರ ಗೌಡ ಎಂಬ ವ್ಯಕ್ತಿ ನೀರುಪಾಲಾಗಿದ್ದಾನೆಂದು ಹೇಳಲಾಗಿದೆ.

RELATED ARTICLES  ಯುದ್ಧದ ದುಷ್ಪರಿಣಾಮಗಳಿಂದಲೂ ಜಾಗತಿಕ ತಾಪಮಾನ ಏರುತ್ತದೆ: ಎನ್.ಆರ್.ಗಜು

ಈ ಫಾಲ್ಸ್‌ ತುಂಬಾ ಆಳವಾಗಿರುವುದರಿಂದ ಮೃತದೇಹವನ್ನು ಹೊರ ತೆಗೆಯಲಾಗಿಲ್ಲ ಎನ್ನಲಾಗಿದೆ. ಸಿದ್ದಾಪುರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ