ಯಲ್ಲಾಪುರ: ಪಾದಾಚಾರಿ ವ್ಯಕ್ತಿಯೊಬ್ಬರಿಗೆ ಹಿಂದಿನಿಂದ ಯಾವುದೋ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ತಾಲೂಕಿನ ಕಿರವ ಗ್ರಾಮದಲ್ಲಿ ಕಾರವಾರ-ಬಳ್ಳಾರಿ ರಾಷ್ಟ್ರೀಯ
ಹೆದ್ದಾರಿಯಲ್ಲಿ ನಡೆದಿದೆ. ನಾರಾಯಣ ರಾಮಾ ಪವಾರ ಅಪಘತದಲ್ಲಿ ಮೃತಪಟ್ಟ ವ್ಯಕ್ತಿ.

RELATED ARTICLES  ಅನಾಥ ಶವದ ಅಂತ್ರಕ್ರಿಯೆ ನಡೆಸಿ ಮಾದರಿಯ ಕಾರ್ಯ.

ಈತ ತಾಲೂಕಿನ ಕಿರವತ್ತಿಯ ಮಂಜುನಾಥ ವರ್ಣೆಕರ ಎಂಬುವರ ಮನೆಯ ಮುಂದೆ ಕಾರವಾರ ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಲ್ಲಾಪುರದಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಯಾವುದೋ ವಾಹನದ ಚಾಲಕನು ಹಿಂದಿನಿಂದ ಡಿಕ್ಕಿ ಹೊಡೆದು ನೆಲದ ಮೇಲೆ ಬೀಳಿಸಿ ಕಾಲ ಮೇಲೆ ತನ್ನ ವಾಹನ ಹತ್ತಿಸಿ ಅಪಘಾತ ಪಡಿಸಿ ಪರಾರಿಯಾಗಿದ್ದಾನೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES  ಸಾಮಾಜಿಕ ಕಾರ್ಯಕರ್ತ ವಿಘ್ನೇಶ್ವರ ಭಟ್ಟ ಇನ್ನಿಲ್ಲ