ಅಂಕೋಲಾ: ಪಟ್ಟಣದ ಬ್ಯೂಟಿ ಪಾರ್ಲರ್ ಒಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಪಾರ್ಲ‌ರ್ ನಲ್ಲಿದ್ದ
ವಸ್ತುಗಳು ಸುಟ್ಟು ಕರಕಲಾದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಅಂಬಾರಕೋಡ್ಡ ರಸ್ತೆಯಲ್ಲಿರುವ ಕಾಂಪ್ಲೆಕ್ಸ ನ
ಮೇಲಿನ ಮಹಡಿಯಲ್ಲಿದ್ದ ಬ್ಯೂಟಿ ಪಾರ್ಲ‌ರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು ಎನ್ನಲಾಗಿದೆ.

RELATED ARTICLES  ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ

ಮಧ್ಯಾಹ್ನದ ವೇಳೆ ಪಾರ್ಲರ್ ಮಾಲಿಕರು ಪಾರ್ಲರ್ ಬಂದ್ ಮಾಡಿ ಊಟಕ್ಕೆ ಮನೆಗೆ ಹೋದ ಸಂದರ್ಭದಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬ್ಯೂಟಿ ಪಾರ್ಲ‌ರ್ ನಿಂದ ಹೊರಗಡೆ ಹೊಗೆ
ಬರುತ್ತಿರುವುದನ್ನು ಕಂಡ ಪಕ್ಕದ ಕಾಂಪ್ಲೆಕ್ಸ್‌ ಹತ್ತಿರ ಇದ್ದ ಓರ್ವ ಯುವಕ ಗಮನಿಸಿ, ಸಂಬಂಧಿಸಿದವರಿಗೆ ವಿಷಯ ತಲುಪಿಸಿದ್ದಾನೆ. ನಂತರ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಪರಿಶೀಲಿಸಿದ್ದಾರೆ. ಈ ಬೆಂಕಿಯ ಅವಘಡಕ್ಕೆ ಪಾರ್ಲರ್ ಒಳಗಿದ್ದ ಸಾಮಗ್ರಿಗಳು ಸುಟ್ಟು ಕರಕಲಾಗಿದೆ ಎಂದು ವರದಿಯಾಗಿದೆ.

RELATED ARTICLES  ಕೊಂಡಕರೆ ಟಿ.ಎಸ್ ಹೆಗಡೆ ಇನ್ನಿಲ್ಲ