ಕುಮಟಾ : ನವರಾತ್ರಿ ಅಂಗವಾಗಿ ಆಯುಧ ಪೂಜೆ ಹಾಗೂ ದುರ್ಗಾದೌಡ ಕುಮಟಾ ತಾಲೂಕಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ನಡೆಯಿತು. ಹಿಂದೂ ಜಾಗರಣಾ ವೇದಿಕೆಯಿಂದ ಇದನ್ನು ಆಯೋಜಸಲಾಗಿತ್ತು. ಈ ವೇಳೆ ಕುಮಟಾದ ಅನೇಕ ಹಿಂದೂವಾದಿಗಳು,ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಭಾಗಿಯಾಗಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ದೇವಿಯ ಆಯುಧಗಳಿಗೆ ಪೂಜೆ ಸಲ್ಲಿಸಿದರು.

ಬಳಿಕ ಹಿಂದೂ ಧ್ವಜದಾರಿಗಳ ಸಮೇತವಾಗಿ ದೇವಿಯ ಸಕಲ ಆಯುಧಗಳನ್ನು ಹಿಡಿದು ಪಟ್ಟಣದ ಮಧ್ಯ ದುರ್ಗಾದೌಡ ನಡೆಸಲಾಯಿತು. ಈ ವೇಳೆ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕ ಭಾಸ್ಕರ ನಾಯ್ಕ ಆಯುಧ ಪೂಜೆ ಎಂದರೆ ಕೇವಲ ವಸ್ತುಗಳ ಪೂಜೆ ಅಲ್ಲ. ತಮ್ಮ ಧರ್ಮಕ್ಕೆ ಯಾವುದೆ ಆಘಾತ, ಅಪಾಯಗಳನ್ನು ಎದುರಿಸಲು ಹಿಂದೂ ಸಮಾಜ ಸನ್ನದವಾಗಿದೆ, ಹಾಗೂ ಹಿಂದೂ ಧರ್ಮದ ಅಬಲರ ಮೇಲೆ ಅನ್ಯಾಯವನ್ನು ತಡೆದು ಅವರನ್ನು ರಕ್ಷಣೆ ನೀಡಲು ಮುಂದಾಗಿರುತ್ತೆ ಎನ್ನುವ ಉದ್ದೆಶದಿಂದ ಹಲವು ವರ್ಷಗಳಿಂದ ಆಯುಧ ಪೂಜೆ ನಡೆಸುಕೊಂಡು ಬರುತ್ತಿದ್ದೇವೆ ಎಂದರು.

RELATED ARTICLES  ಯುವತಿ ನಾಪತ್ತೆ : ಪ್ರಕರಣ ದಾಖಲು.

ಈ ವೇಳೆ ಕುಮಟಾ ಬಿ.ಜೆ.ಪಿ ಮುಖಂಡ ಹಿಂದೂವಾದಿ ಸೂರಜ ನಾಯ್ಕ ಮಾತನಾಡಿ ನಮ್ಮ ದೇಶದಲ್ಲಿ ಮತ್ತು ನಮ್ಮ ಸಮಾಜದಲ್ಲಿರುವ ಶತ್ರುಗಳನ್ನು ಹಾಗೂ ದುಷ್ಠಶಕ್ತಿಗಳನ್ನು ದೂರ ಮಾಡುವ ಉದ್ದೆಶದಿಂದ ದುರ್ಗಾದೌಡ ನಡೆಸಲಾಗುತ್ತೆ. ಈ ಮೂಲಕ ಹಿಂದೂ ಧರ್ಮದ ಒಗ್ಗೂಡಿಸುವಿಕೆ ಹಿಂದೂ ಸಂಘಟನೆಯಿಂದ ದೇಶದಲ್ಲೆಡೆ ನಡೆಯುತ್ತಿದೆ ಎಂದರು.

RELATED ARTICLES  ತರಬೇತಿ ಕಾರ್ಯಾಗಾರ ಸಂಪನ್ನ : ಭತ್ತ, ಅಡಿಕೆ ಮತ್ತು ಶೇಂಗಾ ಬೆಳೆಗಳ ನಿರ್ವಹಣೆ ಕುರಿತು ತರಬೇತಿ : ಹಳದೀಪುರ ಅಗ್ರೋ ಫಾರ್ಮರ್ಸ ಪ್ರೊಡ್ಯೂಸರ್ ಕಂಪನಿ ವತಿಯಿಂದ ಕಾರ್ಯ.

ಈ ದುರ್ಗಾದೌಡ ಕುಮಟಾ ಪಟ್ಟಣದ ಎಲ್ಲಾ ದೇವಾಲಯಗಳಿಗೆ ಬೇಟಿ ನೀಡಿ ಆಯುಧಗಳಿಗೆ ಪೂಜೆ ಸ್ವಿಕರಿಸಿ, ಕುಮಟಾ ಮಹಾಸತಿ ದೇವಾಲಯದಲ್ಲಿ ಮುಕ್ತಾಯವಾಯಿತು.