ಶಿರಸಿ: ಮೇಯಲು ಬಿಟ್ಟಿದ್ದ ದನಗಳನ್ನು ಹುಡುಕುತ್ತ ಬಂದ ಮಹಿಳೆಯೋರ್ವಳು ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ವಡ್ಡಿನಗದ್ದೆಯಲ್ಲಿ ಭಾನುವಾರ ನಡೆದಿದೆ.

ಮೇಯಲು ಬಿಟ್ಟ ದನವನ್ನು ಹುಡುಕುತ್ತಾ ಬಂದ ಸರಸ್ವತಿ ಕೊಡಿಯಾ ಅವರೇ ಮೃತ ದುರ್ದೈವಿ. ಮಳೆಗಾಲವಾದ್ದರಿಂದ ವಿದ್ಯುತ್ ಒಮ್ಮೆಲೇ ಪ್ರವಹಿಸಿದ್ದು, ಕೆಲವೇ ಕ್ಷಣಗಳಲ್ಲಿ ಅವರು ಅಸುನೀಗಿದ್ದಾರೆ ಎಂದು ವರದಿಯಾಗಿದೆ. ಮೃತರಿಗೆ 55 ವರ್ಷ ವಯಸ್ಸಾಗಿತ್ತು. ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇವರ ಮನೆ ಸಮೀಪ ವ್ಯಕ್ತಿಯೋರ್ವರು ಕೋಳಿ ಫಾರಂ ಮಾಡಿಕೊಂಡಿದ್ದಾರೆ. ಈ ಕೋಳಿ ಫಾರಂಗೆ ಐಬೆಕ್ಸ್ ಬೇಲಿ ಹಾಕಿದ್ದಾರೆ. ಆದರೆ, ಐಬೆಕ್ಸ್ ವಿದ್ಯುತ್ ಬದಲಾಗಿ ನೇರ ವಿದ್ಯುತ್ ಸಂಪರ್ಕವನ್ನು ಈ ತಂತಿಗಳಿಗೆ ಜೋಡಿಸಿದ್ದ ಶಂಕೆ ವ್ಯಕ್ತವಾಗಿದೆ. ಈ ಜಾಗವೂ ಅತಿಕೃಮಣದ ಜಾಗ ಎಂಬ ಮಾಹಿತಿ ಹರಿದಾಡುತ್ತಿದೆ.

RELATED ARTICLES  ಪರ್ತಗಾಳಿ ಶ್ರೀಗಳ ದಿಗ್ವಿಜಯೋತ್ಸವ ಮೆರವಣಿಗೆ ಇಂದು