ಭಟ್ಕಳ- ಪ್ರಪಂಚಕ್ಕೆ ಒಂದೇ ಜಾತಿ, ಒಂದೇ ಧರ್ಮ,ಒಬ್ಬನೇ ದೇವರು ಎಂದು ಸಂದೇಶ ಸಾರಿರುವ ಮಹಾನ ಪುರುಷ ಬ್ರಹ್ಮಶ್ರೀ ನಾರಾಯಣ ಗುರುಗಳ 186 ನೆ ಜಯಂತಿಯನ್ನು ಭಟ್ಕಳ ತಾಲೂಕ ಆಡಳಿತ ನೇತೃತ್ವದಲ್ಲಿ ಭಟ್ಕಳ ಸಹಾಯಕ ಆಯುಕ್ತೆ ಮಮಾತಾದೇವಿ ಅವರ ಅಧ್ಯಕ್ಷತೆಯಲ್ಲಿ ಶಿರಾಲಿಯ ಶ್ರೀ ಶಾರದಹೊಳೆ ಹಳೆ ಕೋಟೆ ಹನುಮಂತ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಆಚರಿಸಲಾಯಿತು. ಭಟ್ಕಳದ ಶಾಸಕ ಸುನೀಲ್ ನಾಯ್ಕ ದೀಪ ಬೆಳಗುವುದರ ಮೂಲಕ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಅಧಿಕೃತವಾಗಿ ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕ ಸುನೀಲ್ ನಾಯ್ಕ ಬ್ರಹ್ಮಶ್ರೀ ನಾರಾಯಣ ಗುರುಗಳು ಜಗತ್ತಿಗೆ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎನ್ನುವ ಸಂದೇಶವನ್ನು ಸಾರಿದ ಮಹಾ ಪುರುಷರು ಎಂದು ಹೇಳಿದರು. ನಾರಾಯಣ್ ಗುರುಗಳ ಹೆಸರಿನಲ್ಲಿ ಭಟ್ಕಳದ ಜಾಲಿಯಲ್ಲಿ ಈಗಾಗಲೇ ವಸತಿ ಶಾಲೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮ ಸ್ಥಾಪಿಸುವಂತೆ ಸರಕಾರಕ್ಕೆ ಒತ್ತಡ ಹಾಕುವುದಾಗಿ ತಿಳಿಸಿದರು.

RELATED ARTICLES  ಕರೋನಾ ಹಿನ್ನೆಲೆ ಪರಿಹಾರ ನಿಧಿಗೆ 1 ಲಕ್ಷ ರೂ ನೀಡಿದ ದೀವಗಿ ರಾಮಾನಂದ ಶ್ರೀಗಳು.

ಉಪನ್ಯಾಸಕರಾಗಿ ಆಗಮಿಸಿದ ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ಅವರು ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳು ಕೇರಳ ರಾಜ್ಯದ ತಿರುವನಂತಪುರ ಜಿಲ್ಲೆಯ ಚೆoಬಳಂತಿ ಎಂಬ ಗ್ರಾಮದಲ್ಲಿ 1854 ರಲ್ಲಿ ಜನಿಸಿದರು. ಆ ಸಮಯದಲ್ಲಿ ಕೇರಳದಲ್ಲಿ ಮೇಲವರ್ಗದವರು ಕೆಳ ವರ್ಗದ ಜನರನ್ನು ಶೋಷಣೆಗೆ ಒಳಪಡಿಸುತ್ತಾ ಬರುತ್ತಿದ್ದರು.ಮೇಲ ವರ್ಗದವರು ಕೆಳ ವರ್ಗದ ಜನರಿಗೆ ದೇವಸ್ಥಾನಗಳಿಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರು ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಕೊಡದೆ ಶೋಷಣೆಗೆ ಒಳಪಡಿಸಿದ್ದರು. ಇಂತಹ ಸಮಯದಲ್ಲಿ ನಾರಾಯಣ ಗುರುಗಳು ಶೋಷಿತರ ಪರ ಧ್ವನಿ ಎತ್ತುವ ಮೂಲಕ ಸಮಾಜದಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಕ್ರಾಂತಿ ಆರಂಭಿಸಿದರು. ಶಾಲೆಗಳನ್ನು ತೆರೆಯುವುದರ ಮೂಲಕ ಕೆಳ ವರ್ಗದ ಜನರಿಗೆ ಶಿಕ್ಷಣ ಪಡೆಯಲು ಅವಕಾಶ ಮಾಡಿ ಕೊಟ್ಟರು. ನಂತರ ದೇವಸ್ಥಾನ ಸ್ಥಾಪಿಸಿ ಕೇರಳದ ಜನರಿಗೆ ದೇವರ ದರ್ಶನ ಮಾಡಿಸಿದರು. ಹೀಗೆ ಇಂದಿಗೂ ಕೂಡ ನಾರಾಯಣ ಗುರುಗಳ ಸಂದೇಶ ಮತ್ತು ಅವರ ತತ್ವ ಗಳನ್ನು ಜನರು ಜಗತ್ತಿನಾದ್ಯಂತ ಪಾಲಿಸುತ್ತಾ ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ ಎಂದು ಸರಳವಾಗಿ ನಾರಾಯಣ ಗುರುಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಹಾಯಕ ಆಯುಕ್ತೆ ಮಮಾತಾದೇವಿ ತಹಸೀಲ್ದಾರ್ ಸುಮಂತ .ಬಿ.ಈ , ತಾಲೂಕ ಪಂಚಾಯತ್ ಈ.ಓ ಪ್ರಭಾಕರ್ ಸಿ, ನಾಮಧಾರಿ ಸಮಾಜದ ತಾಲೂಕ ಅಧ್ಯಕ್ಷ ಕೃಷ್ಣ ನಾಯ್ಕ ಅಸರಕೇರಿ, ನಾಮಧಾರಿ ಸಮಾಜದ ಮಾವಳ್ಳಿ ಕೂಟದ ಅಧ್ಯಕ್ಷ ಸುಬ್ರಾಯ ನಾಯ್ಕ, ಹಲೆಕೋಟೆ ಹನುಮಂತ ದೇವಸ್ಥಾನದ ಟ್ರಸ್ಟಿ ಸುಬ್ರಾಯ ನಾಯ್ಕ, ಮುಕುಂದ ನಾಯ್ಕ, ಪತ್ರಕರ್ತ ಮನಮೋಹನ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಇಂದಿನ(ದಿ-28/12/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.