ಶಿರಸಿ : ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಉಡವನ್ನು ಬೇಟೆಯಾಡಿದ ಘಟನೆಯೊಂದು ಶಿರಸಿಯ ಯಾಣ ಕ್ರಾಸ್ ಹತ್ತಿರ ನಡೆದಿದೆ ಎಂದು ತಿಳಿದುಬಂದಿದೆ. ಸರಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಉಡವನ್ನು ನುಂಗಲು ಪ್ರಯತ್ನಿಸಿ ವಿಫಲಾಗಿದೆ.

RELATED ARTICLES  ಭಿಕ್ಷೆ ಬೇಡುವ ತೃತೀಯ ಲಿಂಗಿಗಳಿಂದ ಜನರು ನಾಣ್ಯಗಳನ್ನು ಭಿಕ್ಷೆಯಾಗಿ ಪಡೆಯುತ್ತಾರೆ ಗೊತ್ತಾ?

ಉಡದ ಗಾತ್ರವೂ ದೊಡ್ಡದಾದ್ದರಿಂದ ಮತ್ತು ಕಲ್ಲು ಬಂಡೆಗೆ ಉಡದ ಬಾಲ ಸಿಲುಕಿದ್ದರಿಂದ ಕಾಳಿಂಗ ಸರ್ಪಕ್ಕೆ ಉಡವನ್ನು ನುಂಗಲಾಗದೇ ಅರ್ಧ ನುಂಗಿದ ಉಡವನ್ನು ವಾಪಸ್
ಹೊರಹಾಕಿದೆ. ಕಾಳಿಂಗ ಸರ್ಪದ ಬೇಟೆಯಿಂದ ಉಡವೂ ಸಾವನ್ನಪ್ಪಿದೆ.

RELATED ARTICLES  ಅರಣ್ಯ ವ್ಯಾಪ್ತಿಯ ಅಡ್ಕಾರಿನಲ್ಲಿ ಅರಣ್ಯ ಇಲಾಖೆ ವತಿಯಿಂದ ತರಬೇತಿ ಭವನ ಉದ್ಘಾಟನೆ.

ಈ ಉಡವನ್ನು ನುಂಗುತ್ತಿರುವ ಕಾಳಿಂಗ ಸರ್ಪವನ್ನು ಬೈಕ್ ಸವಾರನಾದ ಸ್ಥಳೀಯ ಅನಂತಮೂರ್ತಿ ಮತ್ತಿಘಟ್ಟ ಎನ್ನುವವರಿಗೆ ಕಂಡಿದ್ದರಿಂದ ಅವರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ ಎನ್ನಲಾಗಿದೆ.