ಶಿರಸಿ: ರಾಷ್ಟ್ರೀಯ ಅಥ್ಲೇಟಿಕ್ ಚಾಂಪಿಯನ್‌ಶಿಪ್ಸ ಅಂಗವಾಗಿ ಆಂಧ್ರ ಪ್ರದೇಶದ ಗೂಂಟುರನಲ್ಲಿ ಜರುಗಿದ 33 ನೇ ದಕ್ಷಿಣ ಭಾರತದ ಕ್ರೀಡಾಕೂಟದ 20 ವರ್ಷದ ಒಳಗಿನ ವಿಭಾಗದಲ್ಲಿ ಶಿರಸಿಯ ರಕ್ಷಿತ್ ರವೀಂದ್ರ 400 ಮೀಟರ್ ಹರ್ಡಲ್ಸ ಮತ್ತು 400 ಮೀಟರ್ ಮಿಕ್ಸಡ ರೀಲೆ ಎರಡೂ ಸ್ಪರ್ಧೆಯಲ್ಲಿಯೂ ದ್ವೀತಿಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದುಕೊಂಡಿರುತ್ತಾನೆ.
ರಕ್ಷಿತ್ ಇತನು ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಬೆಂಗಳೂರಿನಲ್ಲಿ ಒಲಂಪಿಯನ್ ಅಶ್ವಿನಿ ಅಕ್ಕುಂಜಿಯವರಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾನೆ.

RELATED ARTICLES  ಪದ್ಮಭೂಷಣ ಡಾ. ಬಿ.ಎಂ.ಹೆಗಡೆಯವರಿಗೆ ನಿನಾದ ಸಂಘಟನೆಯಿಂದ ಸನ್ಮಾನ

ಸಚಿವರಿಂದ ಅಭಿನಂದನೆ.

ಆಂಧ್ರಪ್ರದೇಶದಲ್ಲಿ ನಡೆದ ದಕ್ಷಿಣ ಭಾರತ ಜೂನಿಯರ್ ಅಥ್ಲೆಟಿಕ್ಸ್‌ ಚಾಂಪಿಯನ್ ಶಿಪ್‌ 20 ವರ್ಷದೊಳಗಿನ 400 ಮೀಟರ್ ಹರ್ಡಲ್ಸ್ ಹಾಗೂ 400 ಮೀಟರ್ ಮಿಶ್ರ ರೀಲೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದ ಶಿರಸಿಯ ಕು.ರಕ್ಷಿತ್ ರವೀಂದ್ರ ಅವರಿಗೆ ಹಾರ್ದಿಕ ಅಭಿನಂದನೆಗಳು.

RELATED ARTICLES  ಹೊನ್ನಾವರ ಜನತೆಯ ಕಷ್ಟ ನೀಗಿಸಲು ಸರ್ವ ಪ್ರಯತ್ನ ಮಾಡಿದ್ದೇನೆ: ಶಾರದಾ ಮೋಹನ ಶೆಟ್ಟಿ.

ರಕ್ಷಿತ್ ಅವರ ಮುಂದಿನ ಕ್ರೀಡಾ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸುತ್ತೇನೆ ಎಂದು ಸಚಿವ ಹೆಬ್ಬಾರ್ ತಿಳಿಸಿದ್ದಾರೆ.