ಹೊನ್ನಾವರ: ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆ ಇಂದೂ ಕೂಡಾ ಬಿಡುವು ನೀಡದ ಕಾರಣ ಎಲ್ಲೆಡೆ ಜಲಮಯವಾಗಿದ್ದು, ನದಿಯಲ್ಲಿ ನೀರಿನ ಹರಿಯುವಿಕೆ ಜಾಸ್ತಿಯಾಗಿ ಮತ್ತೆ ನೆರೆಹಾವಳಿ ಉಂಟಾಗಿದೆ. ಗುಂಡಬಾಳ ನದಿ ಉಕ್ಕಿ ಹರಿಯುತ್ತಿದ್ದು ನದಿಯ ಎಡಬಲದಂಡೆಯಲ್ಲಿನ ನಿವಾಸಿಗಳು ಆತಂಕಿತರಾಗಿ ಪ್ರವಾಹದ ಸಂಕಷ್ಟ ಎದುರಿಸುವಂತಾಗಿದೆ. ಹಲವೆಡೆ ತೋಟ, ಗದ್ದೆ, ಮನೆಗಳಿಗೆ ನೀರು ನುಗ್ಗಿದೆ.

ತಾಲೂಕಿನಲ್ಲಿ ಹಾಗೂ ಘಟ್ಟ ಪ್ರದೇಶಗಳಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆ ಸುರಿದ ಪರಿಣಾಮ ಭಾನುವಾರ ಗುಂಡಬಾಳ ನದಿ ಭರ್ತಿಯಾಗಿ ಏಕಾಏಕೀ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕೆಲವು ದಿನದ ಹಿಂದೆ ಕಾಳಜಿ ಕೇಂದ್ರದಿಂದ ಮನೆಗೆ ಬಂದು ಸಹಜ ಸ್ಥಿತಿಗೆ ಮರಳುವಷ್ಟರಲ್ಲೇ ಮತ್ತೆ ಸುರಿದ ಮಳೆಗೆ ಪುನಃ ಕಾಳಜಿ ಕೇಂದ್ರದತ್ತ ಮುಖ ಮಾಡುವಂತಾಗಿದೆ.

ಚಿಕ್ಕನಕೋಡ ಗ್ರಾ. ಪಂ. ವ್ಯಾಪ್ತಿಯ ಗುಂಡಿಬೈಲ್, ಚಿಕ್ಕನಕೋಡ, ಗುಂಡಬಾಳ, ಹೆಬೈಲ್ ಗ್ರಾಮದಲ್ಲಿ ಗುಂಡಬಾಳ ನದಿಯ ನೀರು ಆವರಿಸುತ್ತಿದೆ. ಹಡಿನಬಾಳ ಹಾಗೂ ಖರ್ವಾ ಗ್ರಾ,ಪಂ ವ್ಯಾಪ್ತಿಯ ನಾಥಗೇರಿ, ಕಡಗೇರಿ, ಕೂಡ್ಲ ತಗ್ಗು ಪ್ರದೇಶಗಳಲ್ಲಿಯೂ ನೀರು ಆವರಿಸಿದೆ. ಇನ್ನು ರಣಭೀಕರ ಮಳೆಯಿಂದ ಎಲ್ಲೆಡೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ.

RELATED ARTICLES  ಕಾರ್ತಿಕ್ ನಾಯಕ ನಿರ್ದೇಶನದ ಕಿರುಚಿತ್ರ 'ಡೆಲಿವರಿ ಬಾಯ್' ಗೆ ಉತ್ತಮ ಪ್ರತಿಕ್ರಿಯೆ : ಮೂರೆ ದಿನದಲ್ಲಿ 12 ಸಾವಿರ ಮಂದಿ ವೀಕ್ಷಣೆ

ಕಂದಾಯ, ಪೊಲೀಸ್‌, ಪಂಚಾಯತ ಮಟ್ಟದ ಅಧಿಕಾರಿಗಳು ಹಾಗೂ ನಿಯೋಜಿಸಲಾದ ನೋಡಲ್ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಸಾರ್ವಜನಿಕರನ್ನು ಕಾಳಜಿ ಕೇಂದ್ರದತ್ತ ಕರೆದೊಯ್ಯುತ್ತಿದ್ದಾರೆ.

RELATED ARTICLES  ಟ್ವೀಟರ್ ನಿಂದ ದೂರ ಉಳಿದ ಮಹಿಳೆಯರು; ಯಾಕೆ ಗೊತ್ತೇ?