ಸಿದ್ದಾಪುರ : ಮಳೆಯ ಅವಾಂತರ ಮುಂದುವರೆದಿದ್ದು, ಜನ ಜೀವನ ಅಸ್ತವ್ಯಸ್ತವಾಗುವಂತೆ ಮಾಡಿದೆ. ನಿನ್ನೆ ತಾಲೂಕಿನ ಕ್ಯಾದಗಿಯಲ್ಲಿ ಸುರಿದ ಭಾರೀ ಮಳೆಗೆ ಮನೆಯ ಗೋಡೆ ಕುಸಿದಿದ್ದು ಮನೆಯಲ್ಲಿ ಮಲಗಿದ್ದ ಯುವಕ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಪದ್ಮಾವತಿ ನಾರಯಣ ಹಸ್ಲರ ಎನ್ನುವವರ ಮನೆಯ ಗೋಡೆ ಕುಸಿದು, ಅವರ ಮಗ ಚಂದ್ರಶೇಖರ ನಾರಾಯಣ ಹಸ್ಲರ್ ಸಾವನ್ನಪ್ಪಿದ್ದಾನೆ.

RELATED ARTICLES  ತಾಲೂಕಾ ಮಟ್ಟದ ಉಚಿತ ಸೈಕಲ್ ವಿತರಣೆ :ನಾಡುಮಾಸ್ಕೇರಿಯಲ್ಲಿ ಸಂಪನ್ನವಾದ ಕಾರ್ಯಕ್ರಮ.

ರವಿವಾರ ರಾತ್ರಿ11-12 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು ತೀವ್ರ ಗಾಯಗೊಂಡಿದ್ದ ಚಂಧ್ರಶೇಖರನನ್ನು ಸಿದ್ದಾಪುರ ಆಸ್ಪತ್ರೆಗೆ ತರಲಾಗಿತ್ತು ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕಳುಹಿಸಿದ್ದರು ಆದರೆ ಮಾರ್ಗ ಮಧ್ಯದಲ್ಲೆ ಯುವಕ ಸಾವನ್ನಪ್ಪಿದ್ದಾನೆ.

RELATED ARTICLES  ಕುಮಟಾಕ್ಕೆ ಆಗಮಿಸಲಿದ್ದಾರೆ ರಾಹುಲ್ ಗಾಂಧಿ!

ಮನೆ ಕುಸಿದ ಸ್ಥಳಕ್ಕೆ ತಹಸೀಲ್ದಾರ ಸಂತೋಷ ಭಂಡಾರಿ,ಆರ್.ಐ.ಯಶವಂತ ಅಪ್ಪಿನಬೈಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ಮೂರು-ನಾಲ್ಕು ದಿನದಿಂದ ತಾಲೂಕಿನಲ್ಲಿ ಭಾರಿ ಮಳೆ ಬೀಳುತ್ತಿದ್ದು ರಭಸದ ಗಾಳಿಯೂ ಬೀಸುತ್ತಿದೆ.ಇದರಿಂದ ಹೆಚ್ಚಿನ ಅನಾಹುತವಾಗುವ ಸಾಧ್ಯತೆ ಇರುತ್ತದೆ.