ಸಿದ್ದಾಪುರ : ತಾಲೂಕಿನ ಹೆಗ್ಗರಣಿ ಸಮೀಪದ ಗುಂಡಿಗದ್ದೆ ಜಲಪಾತದಲ್ಲಿ ಕಾಲು ಜಾರಿ ಬಿದ್ದು ನೀರುಪಾಲಾಗಿದ್ದ ಪ್ರವಾಸಿಗನ ಮೃತದೇಹವನ್ನು ಅಗ್ನಿಶಾಮಕ ದಳದವರು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಯ ವಿವರ ಶನಿವಾರ ಮಧ್ಯಾಹ್ನ ಹುಕ್ಕಳಿ ಗ್ರಾಮದ ಗುಂಡಿಗದ್ದೆ ಜಲಪಾತ ವೀಕ್ಷಣೆಗೆ ಮೈಸೂರು, ಬೆಂಗಳೂರು, ಕೋಲಾರ ಮೂಲದ ಒಟ್ಟು 13 ಜನ ಪ್ರವಾಸಿಗರು ಬಂದಿದ್ದರು. ಈ ಪೈಕಿ ಪ್ರವಾಸಕ್ಕೆ ಬಂದಿದ್ದ ಕೋಲಾರ ಜಿಲ್ಲೆಯ ಮುದುಮತ್ತಿ ಗ್ರಾಮದ ರಾಘವೇಂದ್ರ ಗೌಡ ಎಂಬಾತ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದ, ಸಿದ್ದಾಪುರ ಪೊಲೀಸರು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಸುರಿಯುವ ಮಳೆಯಲ್ಲಿಯೂ ಶೋಧ ಕಾರ್ಯ ನಡೆಸಿದ್ದು, ಸಿದ್ದಾಪುರ-ಕುಮಟಾ ಗಡಿ ಭಾಗದ ಪ್ರದೇಶದಲ್ಲಿ ಪ್ರವಾಸಿಗನ ಮೃತ ದೇಹ ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.

RELATED ARTICLES  ಬಿ.ಜೆ.ಪಿಯವರ ಷಡ್ಯಂತ್ರ ಬಯಲು ಮಾಡಲು ಜನ ಜಾಗೃತಿ ಸಮಾವೇಶ

ಕುಮಟಾ ಪೊಲೀಸರಿಗೆ ಮೃತ ದೇಹವನ್ನು
ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಅಲ್ಲದೆ ಈ ಕಾರ್ಯಾಚರಣೆಗೆ ಸಹಕರಿಸಿದ
ಸ್ಥಳೀಯರಿಗೆ, ಪೊಲೀಸರು ಅಭಿನಂದನೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಕುಮಟಾ ಹೊನ್ನಾವರ ಕ್ಷೇತ್ರದ ಮತದಾರರ ಮನ ಒಲಿಸುವ ಪ್ರಯತ್ನದಲ್ಲಿದ್ದಾರೆ ಶಾರದಾ ಮೋಹನ ಶೆಟ್ಟಿ.