ಸಿದ್ದಾಪುರ : ತಾಲೂಕಿನ ದೊಡ್ಮನೆ ಸಮೀಪದ ಬಳೂರ್ ನಲ್ಲಿ ಜಮೀನಿನ ಬೇಲಿಯ ವಿಷಯವಾಗಿ ಉಂಟಾದ ತಕರಾರನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಡ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಗಣಪತಿ ಗಿಡ್ಡಾ ಗೌಡ(56) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

RELATED ARTICLES  ಹೊಟೆಲ್ ನಲ್ಲಿ ಜೊತೆಗೆ ಕೆಲಸ ಮಾಡುವವನ ಮೇಲೆಯೇ ಹಲ್ಲೆ ಮಾಡಿ ನಗದು ಮೊಬೈಲ್ ದೋಚಿದ ವ್ಯಕ್ತಿ ಪೊಲೀಸ್ ಬಲೆಗೆ.

ರವಿವಾರ ಮನೆಯಿಂದ ಸೊಪ್ಪು ತರಲೆಂದು ಬೆಟ್ಟಕ್ಕೆ ಹೋಗುವುದಾಗಿ ಹೇಳಿ ಹೊದವನು ಮನೆಯಿಂದ ಸ್ವಲ್ಪ ದೂರದಲ್ಲಿನ ಬೆಟ್ಟದಲ್ಲಿರುವ ಮರದ ಟೊಂಗೆಗೆ ನೈಲಾನ್ ಹಗ್ಗದಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಮ್ಮ ಮನೆ ಇರುವ ಜಾಗಕ್ಕೆ ತಾಗಿ ಮೃತನ ಅಣ್ಣ ಜಾಗವಿದ್ದು ಊರಿನಲ್ಲಿ ಸಂಬಂಧಿಕರು ಹಾಗೂ ಹಿರಿಯರು ಸೇರಿ ಬಗೆಹರಿಸಿಕೊಳ್ಳಲು ರಾಜಿ ಪಂಚಾಯಿತಿ ಮಾಡಿದ್ದರು . ಅಲ್ಲದೇ ತಕರಾರು ಇದ್ದ ಬಗ್ಗೆ ಮೃತನ ಅಣ್ಣ ಠಾಣೆಯಲ್ಲಿ ದೂರು ನೀಡಿದ್ದನು.

RELATED ARTICLES  ವಿದ್ಯಾರ್ಥಿಗಳಿಗೊಂದು ಶುಭ ಸುದ್ದಿ; ಇನ್ನು ಮಣಭಾರದ ಬ್ಯಾಗ್ ಹೊತ್ತು ಸಾಗುವ ಅಗತ್ಯವಿಲ್ಲ

ಈ ಘಟನೆ ಕುರಿತು ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.