ಭಟ್ಕಳ: ಇಲ್ಲಿಯ ‘ನಿನಾದ ಸಾಹಿತ್ಯ ಸಂಗೀತ ಸಂಚಯ’ ಸಂಘಟನೆಯ ದಸರಾ ಕಾವ್ಯೋತ್ಸವ ನಿಮಿತ್ತ ಹಮ್ಮಿಕೊಂಡ ಸ್ವರಚಿತ ಕವನ ಸ್ಪರ್ಧೆಯ ಪಲಿತಾಂಶದ ವಿವರ ಈ ಮುಂದಿನಂತಿದೆ.

1 . ashvini kodibailu2. savitri nayak3. shobha hirekai

ಮೊದಲ ಬಹುಮಾನ ಅಶ್ವಿನಿ ಕೋಡಿಬೈಲ್, ದ್ವಿತೀಯ ಬಹುಮಾನ ಸಾವಿತ್ರಿಯ ನಾಯಕ ಕುಮಟಾ, ತೃತೀಯ ಬಹುಮಾನ ಶೋಭಾ ಹೀರೆಕೈ ಸಿದ್ದಾಪುರ ಇವರಿಗೆ ಲಬಿಸಿದೆ. ಶಾರದಾ ಭಟ್ ಕೂಜಳ್ಳಿ, ವಿನಯ್ ವಾಜಂತ್ರಿ ಭಟ್ಕಳ, ಪ್ರೇಮಾ ಟಿ.ಎಮ್.ಆರ್ ಇವರುಗಳ ಕವನಗಳಿಗೆ ತೀರ್ಪುಗಾರರ ಮೆಚ್ಚುಗೆ ಬಹುಮಾನ ಬಂದಿದೆ.
ಬಹುಮಾನವು ಕ್ರಮವಾಗಿ ರೂ.1500 , ರೂ1000 , ರೂ500 ಹಾಗೂ ಬಹುಮಾನ ಫಲಕ, ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ತೀರ್ಪುಗಾರರ ಮೆಚ್ಚುಗೆ ಪಡೆದ ಕವನಗಳಿಗೆ ಪುಸ್ತಕ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಲಾಗುವುದು. ನಾಡಿನ ಹೆಸರಾಂತ ಲೇಖಕ ನಿರ್ದೇಶಕ ಈಚನೂರು ಇಸ್ಮಾಯಿಲ್ ತುಮಕೂರು ಮತ್ತು ಹಿರಿಯ ಕವಿ ಮಾಸ್ಕೇರಿ ಎಂ.ಕೆ.ನಾಯಕ ಇವರು ಕವನ ಸ್ಪರ್ಧೆಯ ನಿರ್ಣಯವನ್ನು ನೀಡಿದ್ದು, ಕವನ ಸ್ಪರ್ಧೆಯ ವಿಜೇತರಿಗೆ ಅ. 8 ರಂದು ಶಿರಾಲಿಯಲ್ಲಿ ನಡೆಯುವ ನಿನಾದ ದಸರಾ ಕಾವ್ಯೋತ್ಸವದಲ್ಲಿ ಬಹುಮಾನ ನೀಡಲಾಗುವುದು ಎಂದು ನಿನಾದ ಸಂಘಟನೆಯ ಸಂಚಾಲಕಿ ರೇಷ್ಮಾ ಉಮೇಶ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

RELATED ARTICLES  ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ 5ನೇ ಸ್ಥಾನಪಡೆದ ನ್ಯೂ ಇಂಗ್ಲೀಷ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು