ಗೋಕರ್ಣ: ಉತ್ತರ ಕನ್ನಡದಲ್ಲಿ ಒಂದಿಲ್ಲೊಂದು ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಯುವ ಜನತೆ ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವುದು ಅತ್ಯಂತ ದುರಂತದ ಸಂಗತಿಯಾಗಿದೆ. ಹಿಂದೂ ಸಹ ಅಂತಹುದೇ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಕುಮಟಾ ತಾಲೂಕಿನ ಗೋಕರ್ಣದ ಭಾವಿ ಕೊಡ್ಲದಲ್ಲಿ ವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.

RELATED ARTICLES  ಭಟ್ಕಳದ ಮಾರಿ ಜಾತ್ರೆಗೆ ಚಾಲನೆ : ವೈಭವದಿಂದ ನಡೆಯಲಿದೆ ಜಾತ್ರೆ

ಸುರೇಶ ಮುರ್ಕುಂಡಿ ಆಗೇರ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸಾವಿನ ಕುರಿತಾಗಿ ತನಿಖೆ ನಡೆಯುತ್ತಿದ್ದು ಇನ್ನೂ ಸಹ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ.

ಮೃತ ದೇಹವನ್ನು ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಚುರುಕು ಗೊಂಡಿದೆ.

RELATED ARTICLES  ಬುಡ ಸಮೇತ ಕಿತ್ತುಬಿದ್ದ ಮರ : ಮನೆ‌ ಜಖಂ