ಕಾರವಾರ: ಸರ್ಕಾರದ ವಿವಿಧ ವಸತಿ ಯೋಜನೆಯಡಿಯಲ್ಲಿ 2022-23 ನೇ ಸಾಲಿಗೆ ಹೊನ್ನಾವರ , ಕುಮಟಾ ವಿಧಾನಸಭಾಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ.ಗಳಿಂದ ಹೆಚ್ಚುವರಿ ಫಲಾನುಭವಿಗಳ ಯಾದಿಯನ್ನು ತಯಾರಿಸಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ ಹಳದೀಪುರ ಗ್ರಾಮ ಪಂಚಾಯಿತಿಗೆ ಯಾವುದೇ ಮಾಹಿತಿಯನ್ನು ನೀಡದೆ ಹೆಚ್ಚುವರಿ ಫಲಾನುಭವಿಗಳ ಯಾದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ಬಗ್ಗೆ ವಿಷಯ ತಿಳಿದು ತಾ.ಪಂ ಕಾರ್ಯಾಲಯಕ್ಕೆ ವಿಚಾರಿಸಿದರೆ ಹಾರಿಕೆಯ ಉತ್ತರವನ್ನು ನೀಡಿ ನುಣುಚಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತರದೆ ಕಾನೂನು ಬಾಹಿರವಾಗಿ ತಯಾರಿಸಿದ ಹೆಚ್ಚುವರಿ ವಸತಿ ಯೋಜನೆಯ ಫಲಾನುಭವಿಗಳ ಯಾದಿಯನ್ನು ತಡೆಹಿಡಿಯುವಂತೆ ಜಿ.ಪಂ ಸಿಇಓ ಅವರಲ್ಲಿ ಮನವಿ ಮಾಡಲಾಗಿದೆ ಎಂದು ಹೊನ್ನಾವರ ತಾಲ್ಲೂಕಿನ ಹಳದಿಪುರ ಗ್ರಾಪಂ ಅಧ್ಯಕ್ಷ ಅಜಿತ ನಾಯ್ಕ‌ ಕಿಡಿ ಕಾರಿದ್ದಾರೆ. ಅವರು ನಗರದ ಪತ್ರಿಕಾ‌ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದಾರೆ.

RELATED ARTICLES  ಕುಮಟಾ ಉತ್ಸವ : ನಗೆಗಡಲಲ್ಲಿ ತೇಲಿದ ನೆನಪಿನೊಂದಿಗೆ ಇಂದು ನಡೆಯಲಿದೆ ಅತ್ಯುತ್ತಮ ಕಾರ್ಯಕ್ರಮ.

ಯಾವುದೇ ವಸತಿ ಯೋಜನೆಯಡಿಯಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಒಪ್ಪಿಗೆಯ ಮೇರೆಗೆ ಅರ್ಹ ಫಲಾನುಭವಿಗಳ ಯಾದಿಯನ್ನು ತಯಾರಿಸಿ ಅದಕ್ಕೆ ಪಿಡಿಓ ಹಾಗೂ ಅಧ್ಯಕ್ಷರ ಸೀಲ್ ಹಾಗೂ ಸಹಿಯೊಂದಿಗೆ ಸರ್ಕಾರಕ್ಕೆ ಸಲ್ಲಿಸುವುದು ನಿಯಮವಾಗಿದೆ. ಆದರೆ ಹೊನ್ನಾವರ ತಾಪಂ ಸ್ಥಳೀಯ ಗ್ರಾಪಂಗೆ ಇರುವ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದರೊಂದಿಗೆ ಸರ್ವಾಧಿಕಾರಿ ಧೋರಣೆ ತೋರಿ, ಅಧ್ಯಕ್ಷರು ಹಾಗೂ ಸದಸ್ಯರ ಅಸ್ತಿತ್ವಕ್ಕೆ ಹಾಗೂ ಅಧಿಕಾರಕ್ಕೆ ಅವಮಾನವಾಗುವ ರೀತಿ ನಡೆದುಕೊಂಡಿದೆ ಎಂದು ಆರೋಪಿಸಿದ್ದಾರೆ.

ಇದೇ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಗಮನಕ್ಕೆ ತರದೇ ಅಕ್ರಮವಾಗಿ ತಯಾರಿಸಿ ಸಲ್ಲಿಸಿದ ಹೆಚ್ಚುವರಿ ಫಲಾನುಭವಿಗಳ ಯಾದಿಯನ್ನು ತಡೆ ಹಿಡಿದು , ಹಳದೀಪುರ ಗ್ರಾಮಪಂಚಾಯಿತಿಯಿಂದ ಯಾದಿಯನ್ನು ಪಡೆದು ಸಲ್ಲಿಸುವಂತೆ ಸಂಭಂದಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಜಿಪಂ ಸಿಇಓ ಅವರಿಗೆ ಮನವಿ ಮಾಡಲಾಗಿದೆ.

ಸದಸ್ಯರಾದ ಗೋವಿಂದ ಜೋಶಿ ಮಾತನಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಹಳದಿಪುರದಲ್ಲಿ ಸ್ವಘೋಷಿತ ನಾಯಕರುಗಳು ಹುಟ್ಟಿಕೊಂಡಿದ್ದು, ಅವರು ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಹಾಗೂ ಶಾಸಕರನ್ನು ದತ್ತು ಪಡೆದಂತೆ ಮಾತನಾಡುತ್ತಿದ್ದು, ಶಾಸಕರ ಆಪ್ತ ಕಾರ್ಯದರ್ಶಿಯ ದೂರವಾಣಿ ಕರೆದ ಮೂಲಕ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅಲ್ಲಿ ಉಲ್ಲೇಖಿಸಿದ್ದು ಗೊಂದಲಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದರು. ಹೆಚ್ಚು ಹೆಚ್ಚು ಮನೆಗಳನ್ನು ತರುತ್ತಿರುವುದು ಒಳ್ಳೆಯ ವಿಚಾರವಾದರೂ ಅರ್ಹ ಫಲಾನುಭವಿಗಳಿಗೆ ಅದು ಸಿಗುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

RELATED ARTICLES  ಭೀಕರವಾಗಿ ನಡೆದ ಸರಣಿ ಅಪಘಾತ : ಮೂವರು ಸಾವು : ನಾಲ್ವರು ಗಂಭೀರ

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ನಾಯ್ಕ,‌ , ಗಂಗೆ ಗೌಡ, ಮಂಗಲಾ ಮುಕ್ರಿ, ವರ್ಧಮಾನ ಜೈನ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.