ಕಾರವಾರ : ಕಾಡು ಪ್ರಾಣಿಗಳು ಹಾಗೂ ಉರಗಗಳು ಆಹಾರವರಿಸಿ ಕಾಡಿನಿಂದ ನಾಡಿಗೆ ಬರುತ್ತಿದ್ದು. ಉರಗ ಪ್ರೇಮಿ ಒಬ್ಬ ಹಾವನ್ನು ಹಿಡಿದು ಕಾಡಿಗೆ ಬಿಟ್ಟ ಘಟನೆ ವರದಿಯಾಗಿದೆ. ತಾಲ್ಲೂಕಿನ ಶಿರವಾಡದ ನಾರಗೇರಿಯಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಆಹಾರ ಅರಸಿ ಕಾಡಿನಿಂದ ಜನವಸತಿ ಪ್ರದೇಶಕ್ಕೆ ಬಂದ ಪರಿಣಾಮ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿತ್ತು.

RELATED ARTICLES  ಎಸ್.ಎಸ್.ಸಿ: 3259 ಪೋಸ್ಟಲ್ ಅಸಿಸ್ಟೆಂಟ್ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಮೀಪದಲ್ಲೇ ದಟ್ಟ ಅರಣ್ಯ ಇರುವುದರಿಂದ ಸುಮಾರು 10 ಅಡಿ ಉದ್ದದ ಹೆಬ್ಬಾವು ತನ್ನ ಬೇಟೆಯನ್ನು ಹಿಂಬಾಲಿಸಿಯೋ ಅಥವಾ ಆಹಾರವನ್ನು ಹುಡುಕುತ್ತಲೋ ನಾರಗೇರಿಯ ಜನವಸತಿ ಪ್ರದೇಶಕ್ಕೆ ಬಂದಿತ್ತು. ಈ ವೇಳೆ ಬಂಜರು ಗದ್ದೆಯಲ್ಲಿ ಕಾಳಿಂಗ ಸರ್ಪ ಇರುವುದನ್ನು ಕಂಡ ಗ್ರಾಮಸ್ಥರು ಕೆಲಕಾಲ ಆತಂಕಕ್ಕೆ ಒಳಗಾದರು.

RELATED ARTICLES  ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಆಹ್ವಾನ

ವಿಡಿಯೋ

ಬಳಿಕ ಉರಗ ಪ್ರೇಮಿ ನಿತಿನ್ ಪೂಜಾರಿಗೆ ವಿಷಯ ಮುಟ್ಟಿಸಲಾಯಿತು. ಸ್ಥಳಕ್ಕಾಗಮಿಸಿದ ಅವರು ಸ್ಥಳೀಯರ ನೆರವಿನಿಂದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು. ಬಳಿಕ ಅರಣ್ಯಾಧಿಕಾರಿಗಳು ಕಾಳಿಂಗವನ್ನು ಜನವಸತಿ‌ ಇಲ್ಲದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.