ಯಲ್ಲಾಪುರ : ಬೈಕ್ ಮತ್ತು ಕಾರು ನಡುವೆ ಢಿಕ್ಕಿ ಸಂಭವಿಸಿ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಹುಬ್ಬಳ್ಳಿ-ಶಿರಸಿ ರಸ್ತೆಯ ಬಾಚಣಿಕೆ ಗ್ರಾಮದ ಬಳಿ ನಡೆದಿದೆ ಎಂದು ತಿಳಿದುಬಂದಿದೆ.

ಗಾಯಗೊಂಡ ಬೈಕ್ ಸವಾರನ್ನು ಜೇನುಮುರಿ ಗ್ರಾಮದ ಬಸವರಾಜ ಶ್ಯಾಡಂಬಿ ಎಂದು ಗುರುತಿಸಲಾಗಿದೆ. ಈ ಅಪಘಾತದ ಪರಿಣಾಮವಾಗಿ ಬೈಕ್ ಸವಾರನ ಕಾಲು ಮತ್ತು ಕೈ ಮುರಿತಕ್ಕೆ ಒಳಗಾಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎನ್ನಲಾಗಿದೆ.

RELATED ARTICLES  ಉತ್ತರಕನ್ನಡ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರಿ ಸಂಘದ ಅಧ್ಯಕ್ಷರಾಗಿ ರವಿ .ಕೆ. ಶೆಟ್ಟಿ ಕವಲಕ್ಕಿ ಅವಿರೋಧ ಆಯ್ಕೆ

ಗಾಯಾಳುವನ್ನು 108 ಅಂಬ್ಯುಲೆನ್ಸ್ ನ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ.ಹಾಗೂ ಚಾಲಕ ಕೆಂಚೇಶ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಗಾಯಾಳುವಿಗೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಗೆ ಕರೆದೊಯ್ದು ದಾಖಲಿಸಿದ್ದಾರೆ.
ಗಾಯಾಳು ಹತ್ತಿರ ಇದ್ದ ಹಣ ಹಾಗೂ ಫೋನ್
ಧನರಾಜ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಎಸ್.ಡಿ.ಎಂ. ಕಾಲೇಜಿನಲ್ಲಿ 'ಸೂಪರ್ ಮೆಗಾ ಕರಿಯರ್ ಕನ್ಸಲ್ಟಿಂಗ್' ಕಾರ್ಯಕ್ರಮ