ಗೋಕರ್ಣ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬರುವವರು ಪ್ರವಾಸದ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ ಸಮುದ್ರ ಪಾಲಾಗುತ್ತಿರುವ ಹಾಗೂ ಅಪಾಯವನ್ನು ತಂದುಕೊಳ್ಳುತ್ತಿರುವ ಘಟನೆಗಳು ಪುನರಾವರ್ತನೆ ಆಗುತ್ತಿದ್ದು ಜಿಲ್ಲಾಡಳಿತಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಇದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಯಾವುದೇ ಘಟನೆ ಇದೀಗ ಮತ್ತೆ ಪುನರಾವರ್ತನೆಯಾಗಿದ್ದು, ಸ್ನೇಹಿತರೊಂದಿಗೆ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಬಂದಿದ್ದ ಪ್ರವಾಸಿ ಯುವಕ ಸಮುದ್ರಪಾಲಾದ ಘಟನೆ ಇಂದು ನಡೆದಿದೆ.

RELATED ARTICLES  ಉತ್ತರಕನ್ನಡದ ಎಸ್.ಪಿ ಶಿವಪ್ರಕಾಶ ದೇವರಾಜು ವರ್ಗಾವಣೆ.

ಗುಲ್ಬರ್ಗ ನಿವಾಸಿ ಶಿವಕುಮಾರ ಹುಚ್ಚಣ್ಣ (23) ಸಮುದ್ರಪಾಲದ ಯುವಕ. ಈತನು ಸ್ನೇಹಿತರ ಜತೆಗೆ
ಗುಲ್ಬರ್ಗದಿಂದ ಗೋಕರ್ಣ ಮಹಾಬಲೇಶ್ವರ ದೇವನ ದರ್ಶನಕ್ಕೆ ಬಂದಿದ್ದ. ಇಂದು ಬೆಳಗಿನ ಜಾವ ಸಮುದ್ರ ಸ್ನಾನ ಮಾಡಿ ದೇವರ ದರ್ಶನ ಪಡೆಯಲು ಸುಮಾರು 9 ಯುವಕರ ತಂಡ ಸ್ನಾನಕೆಂದು ಸಮುದ್ರಕ್ಕೆ ಇಳಿದಾಗ ಈ ಅವಘಡ ಸಂಭವಿಸಿದೆ. ಅಲೆಗಳ ರಭಸಕ್ಕೆ ಈತನು ಸಮುದ್ರದಲ್ಲಿ ಮುಳುಗಡೆಯಾಗಿದ್ದಾನೆ.

RELATED ARTICLES  ಊಟ ಬಡಿಸಿ ಸರಳತೆ ಮೆರೆದ ಪೋಲಿಸ್ ಅಧಿಕಾರಿಗಳು

ಮಾಹಿತಿ ಪಡೆದ ಕರಾವಳಿ ಕಾವಲು ಪಡೆ ಮತ್ತು ಗೋಕರ್ಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಕಡಲಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.