ಭಟ್ಕಳ: ನಾರಾಯಣಗುರು ಅವರ 168 ಜಯಂತಿಯ ಪ್ರಯುಕ್ತ ತಾಲೂಕು ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನ ಸಂಘ,ಭಟ್ಕಳ ಇದರ ವತಿಯಿಂದ ಇತ್ತೀಚಿಗೆ ನಗರದ ಸಿದ್ದಾರ್ಥ ಕಾಲೇಜಿನಲ್ಲಿ ಪಿ.ಯು. ವಿದ್ಯಾರ್ಥಿಗಳಿಗೆ ನಡೆದ ಭಾಷಣ ಸ್ಪರ್ಧೆಯಲ್ಲಿ ನಗರದ ಡಿ.ನ್ಯೂ ಇಂಗ್ಲೀಷ್ ಪಿ.ಯು.ಕಾಲೇಜಿನ ವಿದ್ಯಾರ್ಥಿನಿ ಹರ್ಷಿತಾ ಎಂ. ನಾಯ್ಕ ಪ್ರಥಮ ಸ್ಥಾನ ಪಡೆದಿದ್ದಾಳೆ. ಶಿರಾಲಿಯ ಜನತಾ ವಿದ್ಯಾಲಯದ ರೇನಿಷಾ ರೋಡ್ರಿಗಸ್ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಭಟ್ಕಳದ ಸಿದ್ದಾರ್ಥ ಪಿ.ಯು. ಕಾಲೇಜಿನ ಪರಮೇಶ್ವರಿ ಎಸ್. ಗೌಡ ತೃತೀಯ ಮುರುಡೇಶ್ವರದ ಆರ್.ಎನ್.ಎಸ್. ಪಿ.ಯು. ಕಾಲೇಜಿನ ಸೂರ್ಯ ನಾಯ್ಕ ಸಮಾಧಾನಕರ ಬಹುಮಾನ ಪಡೆದು ಆಯ್ಕೆಯಾಗಿದ್ದಾರೆ.

RELATED ARTICLES  ಕುಮಟಾದಲ್ಲಿ ಕರೋನಾ ಶಂಕೆ: ಮಹಿಳೆಯ ವರದಿಯಲ್ಲಿ ನೆಗೆಟಿವ್ : ದೂರಾಯ್ತು ಆತಂಕ‌

ಸಾಮಾಜಿಕ ಪರಿವರ್ತನೆಗೆ ಶ್ರೀ ನಾರಾಯಣ ಗುರುಗಳ ಕೊಡಗೆ ಎಂಬ ವಿಷಯದಲ್ಲಿ ೫ ನಿಮಿಷ ಅವಧಿಯ ಭಾಷಣ ಸ್ಪರ್ದೇ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯ ಬ್ಯಾಂಕಿನ ನಿವೃತ್ತ ಮುಖ್ಯ ವ್ಯವಸ್ಥಾಪಕರಾದ ಎಸ್.ಎಂ. ನಾಯ್ಕ ,ಹೆಸ್ಕಾಂ ಇಂಜನೀಯ ಶಿವಾನಂದ ಎನ್. ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನ ಸಂಘದ ಅಧ್ಯಕ್ಷ ಮನಮೋಹನ ನಾಯ್ಕ, ಸಿದ್ದಾರ್ಥ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಅರ್ಚನಾ, ಇದ್ದರು. ಸ್ಪರ್ಧೆಯ ನಿರ್ಣಾಯಕರಾಗಿ ಗಂಗಾಧರ ನಾಯ್ಕ, ರ್ಶರೀಧರ ಜಂಬರಮಠ ಹಾಗೂ ಪಾಂಡುರAಗ ನಾಯ್ಕ ಕಾರ್ಯನಿರ್ವಹಿಸಿದರು.

RELATED ARTICLES  ಶಿರಸಿ ನಗರ ವ್ಯಾಪ್ತಿಯಲ್ಲಿ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ: ಶಶಿಭೂಷಣ ಹೆಗಡೆಯವರಿಗೆ ಇನ್ನಷ್ಟು ಬಲ.