ಹೊನ್ನಾವರ: ಎಡಬಿಡದೆ ಸುರಿಯುತ್ತಿರುವ ಮಳೆಯು ಒಂದಿಲ್ಲೊಂದು ಅನಾಹುತವನ್ನು ಸೃಷ್ಟಿ ಮಾಡುತ್ತಿದೆ. ಹಳ್ಳ ಕೊಳ್ಳಗಳು ತುಂಬಿ ಹರಿದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದಾಗಿ ತಾಲೂಕಿನ ಚಂದಾವರ ಗ್ರಾ.ಪಂ ವ್ಯಾಪ್ತಿಯ ಟೇಬ್ರಿ ಹಳ್ಳದ ಸೇತುವೆ ಕೊಚ್ಚಿಹೋಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

RELATED ARTICLES  ಗೋಸ್ವರ್ಗ ಸಂವಾದ, ಸಾವಿರದ_ಸುರಭಿ ( ಸುರಭಿಸೇವಿಕಾ) ಕಾರ್ಯಾಗಾರ

ಕುಮಟಾ, ಚಂದಾವರ ಮಾರ್ಗವಾಗಿ ಸಾಂತಗಲ್, ಬಡಾಳ, ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಸೇತುವೆ ಕೊಚ್ಚಿ ಹೋಗಿದೆ. ವಾಹನ ಸವಾರರು ಹಾಗೂ ಸ್ಥಳೀಯರು ಕೊಚ್ಚಿಹೋದ ಹೊಂಡಗಳಿಗೆ ಕಲ್ಲು-ಮಣ್ಣು ತುಂಬಿ ಸಂಚಾರಕ್ಕೆ ಅನುವುಮಾಡಿಕೊಟ್ಟಿದ್ದಾರೆ. ಇನ್ನು ಸೇತುವೆ ಎರಡು ಬದುಗಳಲ್ಲಿ ಕಬ್ಬಿಣದ ತಡೆಗೋಡೆ ನಿರ್ಮಿಸಿದ್ದರು. ನೀರಿನ ರಭಸಕ್ಕೆ ತಡೆಗೋಡೆಯೂ ನಾಪತ್ತೆಯಾಗಿದೆ. ಈ ಬಗ್ಗೆ ಸಂಬಂಧಿಸಿದ ಜನಪ್ರತಿನಿಧಿಗಳು ಗಮನಹರಿಸಿ ನೂತನ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕಿದೆ.

RELATED ARTICLES  ಟೋಲ್ ಗೇಟ್ ಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡುವಂತಾಗಬೇಕು: ಭಾಸ್ಕರ ಪಟಗಾರ