ಹೊನ್ನಾವರ: ತಾಲೂಕಿನ ಚಂದಾವರದ ಹಿರಿಯ ಪ್ರಾಥಮಿಕ ಶಾಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದುನಿಂತ ಗಿಡಗಂಟಿಗಳನ್ನು ವಿಪತ್ತು ನಿರ್ವಹಣಾ ಘಟಕ ಚಂದಾವರದ ಸದಸ್ಯರು ತೆರವುಗೊಳಿಸುವ ಮೂಲಕ ಮಾನವೀಯತೆ ಮೆರೆದರು. ಶಾಲೆಯ ಸುತ್ತಲೂ ಗಿಡಗಳು ದೊಡ್ಡದಾಗಿ ಬೆಳೆದು ಶಾಲೆ ಕಾಣದ ರೀತಿಯಲ್ಲಿ ಬೆಳದಿತ್ತು. ವಿಪತ್ತು ನಿರ್ವಹಣೆ ಘಟಕ ಚಂದವರದ ಸ್ವಯಂ ಸೇವಕರ ಸಮಾಜ ಸೇವಾ ಕಾರ್ಯಗಳು ತಿಳಿದ ಶಾಲೆಯ ಮುಖ್ಯಧ್ಯಾಪಕರಾದ ಡಿ. ಟಿ. ನಾಯ್ಕ ಅವರು ವಿಪತ್ತು ನಿರ್ವಹಣ ಘಟಕಕ್ಕೆ ಸಹಾಯದ ಕುರಿತು ತಾಲೂಕು ಯೋಜನಾ ಅಧಿಕಾರಿಗಳಿಗೆ ಘಟಕದ ಪ್ರತಿನಿಧಿ ಹಾಗೂ ಸಂಯೋಜಕರಲ್ಲಿ ಮನವಿ ಸಲ್ಲಿಸಿದ್ದರು. ಮನವಿ ಸ್ವೀಕರಿಸಿದ ಶೌರ್ಯ ತಂಡ ಸತತ ನಾಲ್ಕು ಗಂಟೆಗೂ ಮೇಲ್ಪಟ್ಟು ಶಾಲೆಯ ಮುಂಭಾಗ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ಅಶೋಕ್ ಹಾಗೂ ಘಟಕದ ಸೇವಾಪ್ರತಿನಿಧಿಯಾದ ಮಹಾಲಕ್ಮಿ ಹಜಾರಿದ್ದು ಸ್ವಯಂ ಸೇವಕರಿಗೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪ್ರೇರಣೆ ನೀಡಿದರು.
ಸಂಯೋಜಕರಾದ ಶ್ರೀಧರ ನಾಯ್ಕ, ಘಟಕದ ಪ್ರತಿನಿಧಿ ಯಾದ ರೇವತಿ ನಾಯ್ಕ ಇವರ ನೇತೃತ್ವದಲ್ಲಿ ಶಾಲೆಯ ಸುತ್ತಮುತ್ತಲಿನ ಗಿಡಗಳನ್ನು ತೆರವುಗೊಳಿಸಿ ಸ್ವಚ್ಛಗೊಳುಸಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾದ ಸ್ವಯಂ ಸೇವಕರಾದ ರವಿ ನಾಯ್ಕ, ಗಜಾನನ ದೇಶಬಂಡಾರಿ, ಮಣಿಕಂಠ ನಾಯ್ಕ, ವಾಸಂತಿ ಸೇರುಗಾರ, ಮಲ್ಲಿಕಾ ಬಂಡಾರಿ, ವಂದನಾ ನಾಯ್ಕ, ಸಂದ್ಯಾ ನಾಯ್ಕ, ದಿವ್ಯ ಆಚಾರಿ, ಅನುಸಯ್ಯ ನಾಯ್ಕ, ತುಳಸಿ ಚಂದಾವರ ಭಾಗವಯಿಸಿ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಗೊಳಿಸಿದರು.