ಹೊನ್ನಾವರ : ತಾಲೂಕಿನ ಹಳದಿಪುರದ ಸಂಶೀರ್ ಎಂಬುವವರು ಕಾಲ್ನಡಿಗೆಯಲ್ಲಿಯೇ ಅಜ್ಮೀರವರೆಗೆ ತೆರಳುವ ಮೂಲಕ ಪುನಃ ಇದೀಗ ಊರಿಗೆ ಮರಳಿದ್ದಾರೆ. ಕೇರಳದಿಂದ ಮಕ್ಕಾ ತೆರಳು ಬಂದಿದ್ದ ಸಿಯಾಬ್ ಎನ್ನುವವರಿಗೆ ಹಳದಿಪುರದಲ್ಲಿ ವಾಸ್ತವ್ಯಕ್ಕೆ ಎಲ್ಲ ರೀತಿಯ ವ್ಯವಸ್ಥೆಯನ್ನು ಸಂಶೀರ್ ಮಾಡಿಕೊಟ್ಟಿದ್ದರು. ತದನಂತರದಲ್ಲಿ ಸಿಯಾಬ್ ಜೊತೆಗೆ ಅಂಕೋಲಾ ವರೆಗೆ ತೆರಳಿದ್ದ ಅವರು ಅಲ್ಲಿಂದ ಮುಂದೆ ಸ್ವಪ್ರೇರಣೆಯಿಂದ ಅಜ್ಮೀರ ವರೆಗೆ ಹೋಗಿ ಬರುವುದಾಗಿ ತಮ್ಮ ಕುಟುಂಬಕ್ಕೆ ಮಾಹಿತಿ ನೀಡಿ, ತನ್ನ ಸ್ನೇಹಿತರಿಗೂ ಮಾಹಿತಿ ನೀಡಿ ಅಲ್ಲಿಂದ ತೆರಳಿದ್ದರು ಎನ್ನಲಾಗಿದೆ.
ಸರಿಸುಮಾರು 58 ರಿಂದ 59 ದಿನಗಳ ಕಾಲ ಕಾಲ್ನಡಿಗೆಯಲ್ಲಿಯೇ ಇವರು ಪ್ರಯಾಣ ನಡೆಸಿ ಅಜ್ಮೀರ ತಲುಪಿದ್ದಾರೆ. ಪ್ರತಿದಿನ ಸುಮಾರು 40 ಕಿಲೋಮೀಟರ್ ಗೂ ಹೆಚ್ಚು ಕಾಲ್ನಡಿಗೆಯಲ್ಲಿಯೇ ಸಾಗಿದ್ದು ವಿಶೇಷವಾಗಿದೆ. ಇವರು ಆಗಸ್ಟ್ 14ರಂದು ಮಧ್ಯಾರಾತ್ರಿ ಅಜ್ಮೀರ್ ತಲುಪಿದ್ದು, ಆಝಾದಿಕಾ ಅಮೃತ ಮಹೋತ್ಸವವನ್ನು ಆಗಸ್ಟ್ 15ಕ್ಕೆ ಅಲ್ಲಿಯೇ ಆಚರಿಸಿದ್ದಾರೆ. ಅಲ್ಲಿ ವಿವಿಧ ರೀತಿಯಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಇದೀಗ ತನ್ನ ಸ್ವಂತ ಊರಿಗೆ ವಾಪಸ್ ಆಗಿದ್ದು ಜನರು ಈತನನ್ನು ಅಭಿನಂದಿಸುತ್ತಿದ್ದಾರೆ.
ಕಾಲ್ನಡಿಗೆಯಲ್ಲಿಯೇ ಅಜ್ಮೀರ್ ತಲುಪಿದ ಇವರನ್ನು ಕುಟುಂಬದವರು ಹಾಗೂ ಸ್ನೇಹಿತರು ಅಲ್ಲಿಗೆ ಹೋಗಿ ಭೇಟಿಮಾಡಿ ಅವರಿಗೆ ಅಭಿನಂದಿಸಿ, ಸ್ವಾತಂತ್ಯೋತ್ಸವದ ಸಂತಸವನ್ನು ಹಂಚಿಕೊಂಡಿದ್ದು ನಿಜಕ್ಕೂ ಅವಿಸ್ಮರಣೀಯ ಕ್ಷಣ ಎಂದು ಹಳದೀಪುರದ ಅಮ್ಜಧ್ ಖಾನ್ ಸಂತಸ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಾನಂದ ಹೆಗಡೆ ಹಾಗೂ ಇತರ ಪ್ರಮುಖರು ಅಜ್ಮೀರ್ ಗೆ ತೆರಳಿ, ಆತನನ್ನು ಭೇಟಿ ಮಾಡಿದ್ದು ಇನ್ನೊಂದು ವಿಶೇಷ.