ಹೊನ್ನಾವರ : ಸಾಧನೆ ಮಾಡಬೇಕು ಎನ್ನುವ ಛಲವದಿದ್ದರೆ ಸಾಕು, ಸಾಧನೆಗೆ ಯಾವುದೂ ಅಡ್ಡಿ ಇರಲಾರದು ಎಂಬುದು ಮಾತು. ನಿರಂತರ ಪರಿಶ್ರಮ ಹಾಗೂ ಏಕಾಗ್ರತೆಯಿಂದ ಕೆಲಸ ಮಾಡಿದರೆ ಮಹತ್ತರ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಅಕ್ಕಿಕಾಳಿನಲ್ಲಿ ಶಿವ ಪಂಚಾಕ್ಷರಿ ಬರೆದು ದಾಖಲೆ ಮಾಡಿದ ಸುಮುಖ ಪಂಡಿತ ಸಾಕ್ಷಿ.

ಬಳಕೂರಿನ ಪಂಡಿತ ಮನೆತನದ ಸುಮುಖ ಪಂಡಿತ 4000 ಅಕ್ಕಿ ಕಾಳುಗಳನ್ನು ಜೋಡಿಸಿ ಶಿವಪಂಚಾಕ್ಷರಿಯ ಶ್ಲೋಕಗಳನ್ನು ಬರೆದು ಅಬ್ದುಲ್ ಕಲಾಂ ವರ್ಲ್ಡ್ ರೆಕಾರ್ಡ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರ್ಪಡೆಗೊಂಡಿದ್ದಾರೆ. 26 ವರ್ಷದ ಸುಮುಖ ಓದಿದ್ದು ಇಂಜಿನೀಯರಿಂಗ್, ಕರ್ನಾಟಕ, ಕೇರಳಗಳಿಗೆ ಜ್ಯೋತಿಷ್ಯದ ಆಕರಗ್ರಂಥಗಳನ್ನು ಕೊಟ್ಟ ವಿದ್ಯಾಮಾಧವ ಪಂಡಿತರ ವಂಶಜನಾದ ಈತ, ಜ್ಯೋತಿಷ್ಯ ಅಭ್ಯಾಸ ಮಾಡುತ್ತಿದ್ದು, ತಂದೆಯೊಂದಿಗೆ ವೈದಿಕ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ.

RELATED ARTICLES  ಅಪರಿಚಿತ ಮಹಿಳೆಯ ಶವದ ಪ್ರಕರಣ : ಮರ್ಡರ್ ಮಾಡಿದ್ದವರು ಅರೆಸ್ಟ್.

ಗುರುಪೂರ್ಣಿಮೆಯಂದು ಅಕ್ಕಿಕಾಳನ್ನು ಜೋಡಿಸಲು ಆರಂಭಿಸಿ ಒಂದು ವಾರದಲ್ಲಿ ಮುಗಿಸಿರುವ ಸುಮುಖ, ರಾಘವೇಶ್ವರ ಶ್ರೀಗಳಿಂದ ಸನ್ಮಾನ ಪಡೆದಿದ್ದಾರೆ. 30*24 ಇಂಚು ಅಳತೆಯ ಫಲಕದಲ್ಲಿ ಇವರ ಶಿವಪಂಚಾಕ್ಷರಿ ವೀಕ್ಷಿಸಿದ ದಾಖಲೆ ಮಾಡುವ ಸಂಸ್ಥೆಗಳು ಯುವಕನ ಹೊಸ ಪ್ರಯೋಗಕ್ಕೆ ಮೆಚ್ಚುಗೆ ಸೂಚಿಸಿ, ದಾಖಲಿಸಿ, ಪದಕ ಮತ್ತು ಪ್ರಶಸ್ತಿಯನ್ನು ಕಳಿಸಿಕೊಟ್ಟಿವೆ.

RELATED ARTICLES  ಕೊಳೆತ ಸ್ಥಿತಿಯಲ್ಲಿ ದನದ ಮಾಂಸ ಪತ್ತೆ..!

ಇವರ ಸಾಧನೆ ನಿರಂತರವಾಗಲಿ ಹಾಗೂ ಇನ್ನೂ ವಿಶೇಷವಾದ ಸಾಧನೆಗಳು ಇವರಿಂದ ಸಾಧ್ಯವಾಗಲಿ ಎನ್ನುವ ಶುಭಹಾರೈಕೆ ಎಲ್ಲರದ್ದಾಗಿದೆ.