ಹೊನ್ನಾವರ : ಕುಮಟಾ ಮೂಲದ ಹಾಗೂ ತಾಲೂಕಿನ ಶಾಲೆಯೊಂದರಲ್ಲಿ ಎಸ್ ಎಸ್ ಎಲ್ ಸಿ ಕಲಿಯುತ್ತಿರುವ ವಿದ್ಯಾರ್ಥಿಗಳು ಮೊಬೈಲ್ ಕಳ್ಳತನ ಮಾಡಿ ಬಾಲಾಪರಾಧಿಗಳ ಪಟ್ಟಿ ಸೇರಿದ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಅಂಕೋಲಾ ಹಾಗೂ ಹೊನ್ನಾವರದಲ್ಲಿ ನಡೆದ ಮೊಬೈಲ್ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸರು ಈ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಹೊನ್ನಾವರ ಬಸ್ಟಾಂಡ, ಹತ್ತಿರ ಕಿಂತಾಲಕೇರಿ ರಸ್ತೆಯಲ್ಲಿರುವ ಮುಖ್ಯ ಪ್ರಾಣ ಮೊಬೈಲ್ ಶಾಪ್ ನಲ್ಲಿ ರವಿವಾರ ಬಂದಿದ್ದ ಇಬ್ಬರು ಬಾಲಕರು ಮೊಬೈಲ್ ಕವರ ತೆಗೆದುಕೊಳ್ಳುವ ನೆಪದಲ್ಲಿ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಅಂಗಡಿಯಲ್ಲಿದ್ದ ರಿಯಲ್ ಮಿ ಸಿ-35 ಮೊಬೈಲ್ ಫೊನ್ -1, ಅಂದಾಜು ಬೆಲೆ 14,000, ಜಿಯೊ ಡೊಂಗಲ್ ಅಂದಾಜು ಬೆಲೆ 4,900, ಕದ್ದು ಪರಾರಿಯಾಗಿದ್ದರು ಎನ್ನಲಾಗಿದೆ. ಈ ದೃಶ್ಯಗಳು ಮೊಬೈಲ್ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

RELATED ARTICLES  ಪುನೀತನ ಜೊತೆ ಕುಳಿತ ಗಣಪ : ವಿಭಿನ್ನ ಕಲ್ಪನೆಗೆ ಜನ ಮೆಚ್ಚುಗೆ

ಕುರಿತು ಮೊಬೈಲ್ ಅಂಗಡಿ ಮಾಲೀಕ ಹಾಡಗೇರಿ ಮುಟ್ಟಾದ ಯೊಗೇಶ ಈಶ್ವರ ಸಣ್ಣನಾಯ್ಕ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದಲ್ಲದೆ ಕಳೆದ ರವಿವಾರ ಅಂಕೋಲದಲ್ಲಿಯೂ ಸಹ ಮೊಬೈಲ್ ಕಳ್ಳತನ ಮಾಡಿದ್ದರು. ಕಳ್ಳತನಕ್ಕೆ ಚಿಕ್ಕಪ್ಪನ ಬೈಕ್ ಬಳಸುತಿದ್ದ ಇವರು ಕದ್ದ ನಂತರ ಪರಾರಿಯಾಗುತಿದ್ದರು.

RELATED ARTICLES  4 ವರ್ಷದ ಬಾಲಕಿಯ ಅತ್ಯಾಚಾರ ಯತ್ನ : ಪ್ರಕರಣ ದಾಖಲು.

ವ್ಯಾಪಾರದ ಸೋಗಿನಲ್ಲಿ ಹೋಗಿ ಅಂಗಡಿಯವರ ಕಣ್ಣು ತಪ್ಪಿಸಿ ಕದ್ದು ಪರಾರಿಯಾಗುತ್ತಿದ್ದರು ಎನ್ನಲಾಗಿದೆ. ಪ್ರಕರಣವನ್ನು ಬೇಧಿಸಿದ ಹೊನ್ನಾವರ ಪೊಲೀಸರು ಅಪರಾಧಿಗಳನ್ನು ಹಿಡಿಯಲು ಯಶಸ್ಸು ಕಂಡಿದ್ದಾರೆ. ಬಾಲಪರಾಧಿಗಳನ್ನು ರಿಮೆಂಡ್ ಹೋಮ್ ಗೆ ಕಳುಹಿಸಿದ್ದಾರೆ.

ಡಿ. ವೈ. ಎಸ್. ಪಿ. ಬೆಳ್ಳಿಯಪ್ಪ ರವರ ಮಾರ್ಗದರ್ಶನದಲ್ಲಿ, ಸಿ. ಪಿ. ಐ. ಶ್ರೀಧರ್ ಎಸ್. ಆರ್ ರವರ ಸಹಕಾರದೊಂದಿಗೆ ಕ್ರೈಮ್ ಪಿ. ಎಸ್. ಐ ಮಂಜೇಶ್ ಚಂದಾವರ, ಸಿಬ್ಬಂದಿಗಳಾದ ಸಂತೋಷ, ಮಹಾವೀರ, ರಮೇಶ ಲಮಾಣಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.