ಕಾರವಾರ: ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಗೋವಾದಿಂದ ಮಾಜಾಳಿಯ ತನಿಖಾ ಠಾಣೆಯಿಂದ ಸರಾಗವಾಗಿ ಸಾಗಿ ಬಂದ ಕಾರನ್ನು
ಸದಾಶಿವಗಡದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿ ಪರಾರಿಯಾದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್
ಪನ್ನೇಕರ್ ರವರು ಈ ಬಗ್ಗೆ ಖಚಿತ ಮಾಹಿತಿ ಪಡೆದು ಜಿಲ್ಲಾ ವಿಶೇಷ ತಂಡಕ್ಕೆ ಮಾರ್ಗದರ್ಶನ ಮಾಡಿದ್ದು ತಕ್ಷಣ ಕಾರ್ಯಪ್ರವೃತ್ತವಾದ ತಂಡವು ಸದಾಶಿವಗಡ ದೇವಬಾಗ ತಾಲೂಕಿನ ಕ್ರಾಸ್‌ನಲ್ಲಿ ಗೋವಾ ಕಡೆಯಿಂದ ಬರುತ್ತಿದ್ದ ಗೋವಾ ನೋಂದಣಿಯ ಕಾರಿಗೆ ನಿಲ್ಲಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

RELATED ARTICLES  ಮಹಿಳಾ ದಿನಾಚರಣೆಯನ್ನು ಅರ್ಥ ಪೂರ್ಣವಾಗಿಸಿದ ಕಾಳಿಕಾ ಗೆಳೆಯರ ಬಳಗ ಮೋಜಿನಕೇರಿ ಹೆಗಡೆ ಸದಸ್ಯರು

ಆದರೆ ಕಾರಿನ ಚಾಲಕನು ದೂರದಲ್ಲೇ ಕಾರು ನಿಲ್ಲಿಸಿ ಓಡಿ ಪರಾರಿಯಾಗಿದ್ದಾನೆ. ನಂತರ ಪೊಲೀಸರು ವಾಹನದಲ್ಲಿ ಪರಿಶೀಲನೆ ನಡೆಸಿದಾಗ ಸುಮಾರು ಒಂದೂವರೆ ಲಕ್ಷ
ರೂ. ಮೌಲ್ಯದ 27 ಪಾಲಿತಿನ್ ಚೀಲಗಳಲ್ಲಿ 770 ಲೀಟರ್ ಸಾರಾಯಿ ಬಾಟಲಿಗಳಿರುವುದು ಪತ್ತೆಯಾಗಿದೆ. ಮದ್ಯದ ಜೊತೆಗೆ ಸುಮಾರು 5 ಲಕ್ಷ ರೂ. ಮೌಲ್ಯದ ಕಾರನ್ನು ಜಪ್ತಿ ಪಡಿಸಿಕೊಂಡು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿತನ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES  ರೈತರ ಆರ್ಥಿಕತೆ ಬಲಗೊಳ್ಳಲು ಹೈನುಗಾರಿಕೆ ಅಗತ್ಯ : ನಾಗರಾಜ ನಾಯ್ಕ ಬೇಡ್ಕಣಿ

ಈ ಕಾರ್ಯಾಚರಣೆಯಲ್ಲಿ ಎಸ್.ಪಿ. ಡಾ. ಸುಮನ್, ಅಡಿಷನಲ್ ಎಸ್.ಪಿ. ಎಸ್ ಬದರಿನಾಥ ಮಾರ್ಗದರ್ಶನದಲ್ಲಿ ಜಿಲ್ಲಾ ವಿಶೇಷ ವಿಭಾಗದ ಪಿ.ಎಸ್.ಐ. ಪ್ರೇಮನಗೌಡ ಪಾಟೀಲ್, ಸಿಬ್ಬಂದಿಗಳಾದ ರಾಘವೇಂದ್ರ ಜಿ., ಭಗವಾನ ಗಾಂವಕರ, ಸಂತೋಷ್ ಕುಮಾರ್, ಮಹದೇವ ಸಿದ್ದಿ ಅವರ ತಂಡವು ಪಾಲ್ಗೊಂಡಿತ್ತು ಎಂದು ವರದಿಯಾಗಿದೆ.