ಭಟ್ಕಳ: ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರು ವೃದ್ದೆಯೋರ್ವರ ಹೊಟ್ಟೆಯಲ್ಲಿದ್ದ ಸರಿ ಸುಮಾರು 10 ಕೆಜಿಯ ದೊಡ್ಡದಾದ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕುಮಟಾ ಬಗ್ಗೋಣ ಮೂಲದ 62 ವರ್ಷದ ಸಾವಿತ್ರಿ ನಾಯ್ಕ ಎನ್ನುವವರು ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ಕುರಿತಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ವೈದ್ಯರ ಶಿಫಾರಸ್ಸಿನ ಮೇರೆಗೆ ಸ್ಕ್ಯಾನಿಂಗ್ ಮಾಡಿದಾಗ ಹೊಟ್ಟೆಯಲ್ಲಿ ಗಡ್ಡೆ ಇರುವುದು ಕಂಡುಬಂದಿತ್ತು ಎನ್ನಲಾಗಿದೆ.

RELATED ARTICLES  ಶ್ರೀಮತಿ ಲಲಿತಾ ಶ್ರೀನಿವಾಸ ರೇವಣಕರ ನಿಧನ :ಲಾಯನ್ಸ್ ಹ್ಯುಮೆನಿಟೇರಿಯನ್ ಸರ್ವೀಸ್ ಟ್ರಸ್ಟ್ ನ ಸದಸ್ಯರಿಂದ ಶೃದ್ಧಾಂಜಲಿ

ನಂತರ ಸಂಬಂಧಿಕರ ಸಲಹೆ ಮೇರೆಗೆ ಭಟ್ಕಳಕ್ಕೆ ಬಂದು, ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಸ್ತ್ರೀರೋಗ ತಜ್ಞ ಡಾ.ಸಹನ್ ಎಸ್.ಕುಮಾರ ಅವರು ತಪಾಸಣೆ ನಡೆಸಿ, ಶಸ್ತ್ರಚಿಕಿತ್ಸೆ ನಡೆಸಿದಾಗ ಹೊಟ್ಟೆಯಲ್ಲಿ ಸುಮಾರು 10 ಕೆಜಿಯ ಗಡ್ಡೆ ಪತ್ತೆಯಾಗಿದೆ. ಸದ್ಯ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆಯನ್ನ ಹೊರತೆಗೆಯಲಾಗಿದ್ದು, ವೃದ್ಧೆಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆ ಕವಲಕ್ಕಿಯಲ್ಲಿಯಲ್ಲಿ ಮಕ್ಕಳಿಗೆ ಅಡುಗೆ ಸ್ಪರ್ಧೆ