ಕಾರವಾರ : ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಕಡಲತೀರದಲ್ಲಿ ಸುಮಾರು 45-50 ವರ್ಷ ಪ್ರಾಯದ ಪುರುಷನ ಮೃತದೇಹ ಕಂಡುಬಂದಿದ್ದು, ಮೀನುಗಾಗರಿಂದ ಮಾಹಿತಿ ತಿಳಿದ ಚಿತ್ತಾಕುಲ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪಂಚನಾಮೆ ನಡೆಸಿ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದ ಘಟನೆ ತಾಲ್ಲೂಕಿನ ಸದಾಶಿವಗಡದ ದೇವಬಾಗ ಕಡಲತೀರದಲ್ಲಿ ಬುಧವಾರ ನಡರದಿದೆ.

ಶವ ಯಾರದ್ದು ಎಂಬ ಬಗ್ಗೆ ಮಾಹಿತಿ ಇಲ್ಲ ವಾಗಿದ್ದು, ಅಪರಿಚಿತ ಶವದ ಮಾಹಿತಿ ಕಲರಹಾಕುವ ಕಾರ್ಯ ಪ್ರಗತಿಯಲ್ಲಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣದಂತೆ ಗೋಚರಿಸುತ್ತಿದ್ದು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾಗಿದೆ. ಘಟನೆಯಿಂದಾಗಿ ಸಮುದ್ರ ತಡದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

RELATED ARTICLES  ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಕಾಳಿ ಸೇತುವೆಯ ಮೇಲಿಂದ ಜಿಗಿದು ಅಥವಾ ಇನ್ಯಾವುದೋ ರೀತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ, ಇಲ್ಲವೇ ಆಕಸ್ಮಿಕವಾಗಿ ಕಾಲು ಜಾರಿ ನದಿಯಲ್ಲಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದೆ ಎಂಬುದು ಸ್ಥಳೀಯ ಮಾಹಿತಿ. ಶವದ ಗುರುತು ಇನ್ನೂ ಪತ್ತೆಯಾಗಿಲ್ಲ. ಆದ್ದರಿಂದ ಮೃತನ ಪರಿಚಯ ಅಥವಾ ವಿಳಾಸದ ಮಾಹಿತಿ ಇದ್ದವರು ಚಿತ್ತಾಕುಲ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ. ಅಥವಾ ದೂರವಾಣಿ ಸಂಖ್ಯೆ 08382-265733, 9480805248 ಕೂಡಾ ಮಾಹಿತಿ ನೀಡಬಹುದಾಗಿದೆ.

RELATED ARTICLES  ಕಾರಿನ ಮೇಲೆ ಮುರಿದು ಬಿದ್ದ ಮರ.