ಅಂಕೋಲಾ : ತಾಲೂಕಿನ ಹುಲಿದೇವರವಾಡಾ ವ್ಯಾಪ್ತಿಯಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ ಹುಲಿ ದೇವರವಾಡಾ ಹತ್ತಿರ ಸುರಂಗ ಮಾರ್ಗದಲ್ಲಿ ರೈಲ್ವೆ ಹಳಿಪಕ್ಕ ವ್ಯಕ್ತಿ ಯೋರ್ವರ ಶವ ಪತ್ತೆಯಾಗಿದ್ದು, ಇದು ಯಾರದ್ದಿರಬಹುದು ಎಂಬ ಬಗ್ಗೆ ಸ್ಥಳಿಯ ಜನರು ಹುಡುಕಾಟ ನಡೆಸಿದ್ದು, ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.

ಸುದ್ದಿ ತಿಳಿದು ಪಿಎಸ್ ಐ ಪ್ರವೀಣ ಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತ ವ್ಯಕ್ತಿಯ ಮೊಬೈಲ್ ಮೂಲಕ ಆತನ ಪರಿಚಿತರ ಸಂಪರ್ಕ ಮಾಡಿ ವಿಳಾಸ ಪತ್ತೆ ಮಾಡಲಾಗಿ ಆತನು ರವಿಸುಂದರ ರಾಮಪ್ಪ ಎಂದು ಗುರುತಿಸಲಾಗಿದೆ. ಗೋವಾದ ಪೆಟ್ರೋಲ್ ಪಂಪ್ ಒಂದರಲ್ಲಿ ಕೆಲಸಕ್ಕಿದ್ದ ಎನ್ನಲಾದ ಈತ ಗೋವಾದಿಂದ ಮಂಗಳೂರು ಮಾರ್ಗವಾಗಿ ಊರಿಗೆ ರೈಲ್ವೆಯಲ್ಲಿ ಪ್ರಯಾಣಿಸುತ್ತಿರಬೇಕಾದರೆ,ಮಾರ್ಗ ಮಧ್ಯೆ ಅಂಕೋಲಾದಲ್ಲಿ ಪ್ರಾಣಹಾನಿ ಸಂಭವಿಸಿದೆ ಎನ್ನಲಾಗಿದೆ.

RELATED ARTICLES  ಕರೋನಾ ತಡೆಗಾಗಿ ಶ್ರಮಿಸುತ್ತಿರುವವರಿಗೆ ನೆರವಾದ ಸೂರಜ್ ನಾಯ್ಕ ಸೋನಿ.

ಕೊಡಗು(ಮಡಿಕೇರಿ) ಮೂಲದ ಸದ್ಯ ಉಡುಪಿಯಲ್ಲಿ ನೆಲೆಸಿದ್ದ ಈತ ಚಲಿಸುತ್ತಿರುವ ರೈಲಿನಿಂದ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಕೇಳಿ ಬಂದಿದೆ. ಮೃತ ದೇಹದ ಪಕ್ಕದಲ್ಲಿ ನ್ಯೂಸ್ ಪೇಪರ್,ಚಕ್ಕುಲಿ ಪಾಕೆಟ್,ಚಪ್ಪಲಿ ಮತ್ತು ಛತ್ರಿ ಕಂಡುಬಂದಿದ್ದು, ತರಚಿದ ಗಾಯಗಳಾಗಿವೆ. ಮೃತ ದೇಹವನ್ನು ತಾಲೂಕ ಆಸ್ಪತ್ರೆ ಶವಗಾರಕ್ಕೆ ಸಾಗಿಸಲು ಸಹಕರಿಸಿ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗಿದೆ.

RELATED ARTICLES  ಕುಮಟಾ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಗುರಿ- ನಿವೇದಿತ್ ಆಳ್ವಾ