ಭಟ್ಕಳ: ತಮ್ಮ ವ್ಯಕ್ತಿತ್ವದಿಂದಾಗಿ ವಿಶ್ವೇಶ್ವರಯ್ಯನವರು ತಮ್ಮ ವೃತ್ತಿಗೆ, ಈ ನಾಡಿಗೆ ಘನತೆಯನ್ನು ತಂದುಕೊಟ್ಟಿದ್ದಾರೆ ಎಂದು ಹೆಸ್ಕಾಂನ ಅಭಿಯಂತರ ಶಿವಾನಂದ ನಾಯ್ಕ ನುಡಿದರು. ಅವರು ಇಲ್ಲಿನ ಗಾಂಧಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾಮಾಣ್ಯ ವ್ಯಕ್ತಿಯೊಬ್ಬ ಬಡತನ ಮತ್ತು ಎಲ್ಲ ಸವಾಲುಗಳ ನಡುವೆಯೂ ವಿಶ್ವವೇ ಬೆರಗಾಗುವಂತಹ ಅಸಾಮಾನ್ಯ ಸಾಧನೆಯನ್ನು ಮಾಡಬಹುದೆಂಬುದಕ್ಕೆ ವಿಶ್ವೇಶ್ವರಯ್ಯನವರು ಮಾದರಿ. ಬದುಕಿನುದ್ದಕ್ಕೂ ಶೀಸ್ತು ಮತ್ತು ಸಮಯ ಪಾಲನೆಯನ್ನು ರೂಢಿಸಿಕೊಂಡು ಪ್ರಾಮಾಣಿಕತೆಯಿಂದ ಬದುಕಿದರು. ಈ ನಾಡಿಗೆ ಹಲವು ಕೊಡುಗೆಗಳನ್ನು ನೀಡಿದ ಅವರ ಬದುಕು ಸಾಧನೆಯನ್ನು ಅರಿತು, ಅದರಿಂದ ಪ್ರೇರಣೆ ಪಡೆದು ವಿದ್ಯಾರ್ಥಿಗಳೂ ಸಾಕರಾಗಬೆಕೆಂದು ನುಡಿದರು.

RELATED ARTICLES  ಕೋಟಿ ತೀರ್ಥದಲ್ಲಿ ಈಜಲು ತೆರಳಿದ ವ್ಯಕ್ತಿ ಸಾವು

ಬಹುಮಾನ ವಿತರಿಸಿದ ನಿವೃತ್ತ ಶಿಕ್ಷಕ ಕಸಾಪ ಹಿರಿಯ ಆಜೀವ ಸದಸ್ಯ ಶೇಷಗಿರಿ ಗವಾಳಿ ಮಾತನಾಡಿ ಪ್ರಾಮಾಣಿಕತೆ ಮತ್ತು ನಿರಂತರ ಪರಿಶ್ರಮದಿಂದ ನಮ್ಮ ಕನಸನ್ನು ನನಸು ಮಾಡಿಕೊಳ್ಳಬೇಕೆಂಬುದೇ ವಿಶ್ವೇಶ್ವರಯ್ಯನವರ ಜೀವನದಿಂದ ಅರಿತುಕೊಳ್ಳಬೇಕೆಂದರಲ್ಲದೇ ಇಂಥ ಸಾಧಕರ ಜನ್ಮದಿನಾಚರಣೆಯನ್ನು ಸಾಹಿತ್ಯ ಪರಿಷತ್ತು ಆಯೋಜಿಸಿರುವುದು ಅರ್ಥಪೂರ್ಣ ಎಂದು ನುಡಿದರು. ಮುಖ್ಯಾಧ್ಯಾಪಕ ವೆಂಕಟೇಶ ನಾಯ್ಕ ಉಪನ್ಯಾಸ ನೀಡಿ ವಿಶ್ವೇಶ್ವರಯ್ಯನವರ ಬದುಕಿನ ಪ್ರೇರಣಾದಾಯಕ ಸಂಗತಿಗಳನ್ನು ಮಕ್ಕಳಿಗೆ ಪರಿಚಯಿಸಿದರು. ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರಂಭದಲ್ಲಿ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತಲ್ಲದೇ ಅವರ ಬದುಕು ಸಾಧನೆಯ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿಶ್ವೇಶ್ವರಯ್ಯನವರ ಬದುಕು ಸಾಧನೆಯ ಕುರಿತಾದ ಭಾಷಣ ಸ್ಪರ್ಧೆಯಲ್ಲಿ ಗೌರಿಶ ನರಸಿಂಹ ಮೊಗೇರ, ಮಹ್ಮದ್ ಆಸೀಫ್, ವೇದಾ ನಾರಾಯನ ನಾಐಕ ಅನುಕ್ರಮವಾಗಿ ಪ್ರಥಮ ದ್ವಿತೀಯ,ತ್ರತೀಯ ಬಹುಮಾನ ಪಡೆದರು.

RELATED ARTICLES  ಪತ್ರಕರ್ತ ದಿ. ವಿನಾಯಕ ಬ್ರಹ್ಮೂರಿಗೆ ಕುಮಟಾ ಕನ್ನಡ ಸಂಘದಿಂದ ಅಶ್ರುತರ್ಪಣ.

ಕಾರ್ಯಕ್ರಮದ ವೇದಿಕೆಯಲ್ಲಿ ಸಮಾಜ ಸೇವಕ, ಕಸಾಪ ಆಜೀವ ಸದಸ್ಯ ಫಾರೂಕ ಶೆಕ್, ಹಳೆ ವಿದ್ಯಾರ್ಥಿ ಸಂಘದ ಪ್ರತಿನಿದಿ ಮನೋಹರ ನಾಯ್ಕ, ಎಸ್,ಡಿ,ಎಂ.ಸಿ ಉಪಾಧ್ಯಕ್ಷೆ ಮುಬಿನಾ,ಸದಸ್ಯೆ ಶಶಿಕಲಾ ನಾಯ್ಕ ಉಪಸ್ಥಿತರಿದ್ದರು, ವಿದಯಾರ್ಥೀನಿಯರಾದ ನೇಹಾ,ಪ್ರಥ್ವಿಜಾ,ವಿನುತಾ ಮತ್ತು ವೇದಾ ಸ್ವಾಗತ ಗೀತೆ ಹಾಡಿದರ ಶಿಕ್ಷಕಿ ಅಪರ್ಣಾ ಸ್ವಾಗತಿಸಿದರು. ಶಿಕ್ಷಕಿ ಪ್ರೇಮಾ ನಾಯ್ಕ ವಂದಿಸಿದರೆ, ಶಿಕ್ಷಕಿ ಸಂಧ್ಯಾ ಶಾನಭಾಗ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.