ಕುಮಟಾ : ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಮತ್ತುಆರೋಗ್ಯ ಕ್ಷೇತ್ರಗಳಲ್ಲಿ ಹಲವು ಹಲವು ವೈಶಿಷ್ಟ್ಯ ಪೂರ್ಣ, ಸೃಜನಶೀಲ ಚಟುವಟಿಕೆಗಳನ್ನು ಸದಾ ಹಮ್ಮಿಕೊಂಡು ಗುರುತಿಸಿಕೊಂಡಿರುವ ಸಂಘವೆಂದರೆ ಅದು ವಿವೇಕ ನಗರ ವಿಕಾಸ ಸಂಘ (ರಿ)ಕುಮಟಾ. ಈ ಸಂಘದ ಆಶ್ರಯದಲ್ಲಿ ನಿಟ್ಟೆ ಜಸ್ಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು ಇವರಿಂದ ಹಿರಿಯ ಪ್ರಾಥಮಿಕ ಶಾಲೆ ವಿವೇಕ ನಗರ ಕುಮುಟಾ ಇಲ್ಲಿ ದಿನಾಂಕ 18/9 2022 ರವಿವಾರದಂದು ಬೆಳಿಗ್ಗೆ 9:00 ರಿಂದ 1 ಗಂಟೆಯವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ( ರಿ) ಕೂಡ ಇದಕ್ಕೆ ಕೈಜೋಡಿಸಿದ್ದು ಶಿಬಿರದಲ್ಲಿ ಜನರಲ್ ಮೆಡಿಸಿನ್, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಹೃದಯ ರೋಗ, ಎಲುಬು ಮತ್ತು ಕೀಲು ಚಿಕಿತ್ಸೆ, ಬೆನ್ನು ಮೂಳೆ ಚಿಕಿತ್ಸೆ, ಮೊಣಕಾಲಿನ ಚಿಕಿತ್ಸೆ, ಕ್ಯಾನ್ಸರ್ ,ಅಪೆಂಡಿಕ್ಸ್, ಅಲ್ಸರ್, ಥೈರಾಯಿಡ್, ಹರ್ನಿಯಾ, ಮೂಲವ್ಯಾಧಿ, ಸಂಧಿವಾತ, ಉದರ ಸಂಬಂಧಿ ಕಾಯಿಲೆ, ವೆರಿಕೋಸ್ ವೆನ್, ನರ ಸಂಬಂಧಿ ಚಿಕಿತ್ಸೆಗಳ ತಪಾಸಣೆಯನ್ನು ಉಚಿತವಾಗಿ ನಡೆಸಲಾಗುವುದು.
ಶ್ರೀ ಕೆಎಸ್ ಹೆಗಡೆ ಆಸ್ಪತ್ರೆಯ ನುರಿತ ವೈದ್ಯರುಗಳಾದ ಡಾಕ್ಟರ್ ಸನತ್ ಕುಮಾರ್ ಶೆಟ್ಟಿ ಎಲುಬು ಮತ್ತು ಕೀಲು ತಜ್ಞರು, ಡಾಕ್ಟರ್ ಚಂದ್ರಮೌಳಿ ಶ್ವಾಸಕೋಶ ತಜ್ಞರು, ಡಾಕ್ಟರ್ ಪ್ರಸಾದ್ ಶಂಕರ್ ಶೆಟ್ಟಿ ಶಸ್ತ್ರಚಿಕಿತ್ಸಾತಜ್ಞರು, ಡಾಕ್ಟರ್ ರಾಮ್ ಮೋಹನ್ ಭಂಡಾರಿ ವೈದ್ಯಕೀಯ ತಜ್ಞರು ಆಗಮಿಸುವರು. ವೈದ್ಯರು ಸೂಚಿಸಿದವರಿಗೆ ರಕ್ತದೊತ್ತಡ ಮಧುಮೇಹ ಪರೀಕ್ಷೆ ಇಸಿಜಿ ಪರೀಕ್ಷೆಗಳನ್ನು ಮತ್ತು ಉಚಿತವಾಗಿ ಸಾಮಾನ್ಯ ಔಷದಗಳನ್ನು ನೀಡಲಾಗುವುದು.
ಅಲ್ಲದೆ ವಿಶೇಷವಾಗಿ ವೈಯಕ್ತಿಕ ಮತ್ತು ಕುಟುಂಬದ ಆರೋಗ್ಯ ವಿಮಾ ಯೋಜನೆ ಕ್ಷೇಮ ಹೆಲ್ತ್ ಕಾರ್ಡ್ ನೋಂದಾವಣೆ ಕೂಡ ಮಾಡಲಾಗುವುದು. ಕುಮಟಾ ಭಾಗದ ಸಾರ್ವಜನಿಕರು ಈ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕಾರ್ಯಕ್ರಮ ಸಂಘಟಕರು ಕೋರಿರುತ್ತಾರೆ. ಶಿಬಿರದ ಕುರಿತು ವಿಶೇಷ ಮಾಹಿತಿ ಬೇಕಾದಲ್ಲಿ 9448906444, ಅಥವಾ 7760690640 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.