ಭಟ್ಕಳ : ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಭಟ್ಕಳ ಶಾಸಕ ಸುನೀಲ್ ನಾಯ್ಕ ತನ್ನ ಸ್ವಂತ ಖರ್ಚಿನಿಂದ ಒಂದು ಸ್ವಾಗತ ಗೋಪುರ ನಿರ್ಮಿಸಲು ತಯಾರಿ ನಡೆಸಿದ್ದು, ಈ ಸ್ವಾಗತ ಕಮಾನಿನ ಕಾರ್ಯಗಳು ಆರಂಭಗೋಡಿರುವ ಬಗ್ಗೆ ಸಹಿಸಲಾರದ ಅನ್ಯ ಕೋಮಿನ ಕೆಲವು ಜನರು, ಪಿಪಲ್‌ ಆಫ್‌ ಭಟ್ಕಳ ಎಂಬ ಹೆಸರಿನಲ್ಲಿನ ಟಿಪ್ಪು ಸುಲ್ತಾನ ಫೋಟೋ ಇರುವ ಬ್ಯಾನರ್ ಹಾಕಿದ್ದು, ಭಟ್ಕಳದಲ್ಲಿ ಕೋಮು ಸೌಹಾರ್ಧತೆಯನ್ನು ಕದಡಲು ಟಿಪ್ಪು ಸುಲ್ತಾನ ಹೆಸರಿನಲ್ಲಿ ಗೇಟ್‌ ನಿರ್ಮಿಸುವ ವಿವಾದದ ನಿರ್ಮಿಸಿ ಜನರಲ್ಲಿ ಭಯವನ್ನು ಉಂಟುಮಾಡಲು ಪ್ರಯತ್ನಿಸಿರುವಂತೆ ಕಂಡುಬರುತ್ತಿದೆ.

ಸುಲ್ತಾನ ಸ್ಟ್ರೀಟ್‌ನ ಮೂಖಾಂತರ ಆಸರಕೇರಿ ಶ್ರೀ ತಿರುಮಲ ವೆಂಕಟ್ರಮಣ ದೇವಸ್ಥಾನಕ್ಕೆ ಸಾಗುವ ಮಾರ್ಗದಲ್ಲಿ ಟಿಪ್ಪು ಸುಲ್ತಾನನ ಹೆಸರಿನಲ್ಲಿ ಸ್ವಾಗತ ಗೇಟ್‌ ( ಸ್ವಾಗತ ಗೋಪುರ) ವನ್ನು ನಿರ್ಮಾಣ ಮಾಡಲು ತಯಾರಿ ನಡೆಸಿ ಈ ಬಗ್ಗೆ ನಿನ್ನೆ ಆ ಪ್ರದೇಶದಲ್ಲಿ ಟಿಪ್ಪು ಸುಲ್ತಾನ ಫೋಟೋ ಇರುವ ಒಂದು ಕಟೌಟ್‌ನ್ನು ಹಾಕಲಾಗಿತ್ತು. ಈ ಸಂಭಂದ ಇಂದು ಮುಂಜಾನೆ ಅದೇ ಪ್ರದೇಶದಲ್ಲಿ ಹೊಂಡ ತೆಗೆಯುತ್ತಿರುವದನ್ನು ಗಮನಿದ ವ್ಯಕ್ತಿಯೊರ್ವರು ಈ ಬಗ್ಗೆ ಪೋಲಿಸ್‌ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿಪೊಲೀಸರು ಕೆಲಸವನ್ನು ನಿಲ್ಲಿಸಿದ್ದಾರೆ. ಪೊಲಿಸರನ್ನು ಆ ಆಯಾಕಟ್ಟಿನ ಪ್ರದೇಶದಲ್ಲಿ ನಿಯೋಜಿಸಿ ಸಂಭವಿಸಬಹುದಾದ ಅಹಿತಕರ ಘಟನೆಯನ್ನ ಪೋಲಿಸ್‌ ಇಲಾಖೆ ತಡೆದಿದೆ.

RELATED ARTICLES  ದೇಶಪಾಂಡೆಯವರೊಂದಿಗೆ ಫೋಟೋ ತೆಗೆಸಿದರು ಆದರೆ ಇನ್ನೂ ವಾಹನ ಕೊಟ್ಟಿಲ್ಲ.

ಈ ವಿಷಯಕ್ಕೆ ಸಂಭಂದಿಸಿದಂತೆ ಪುರಸಭೆಯ ಮುಖ್ಯಾಧಿಕಾರಿಗಳು, ತಹಸೀಲ್ದಾರರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಸರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಸ್ವಾಗತ ಗೋಪುರ ನಿರ್ಮಾಣ ಕಾರ್ಯಗಳಿಗೋಸ್ಕರ ಇರಿಸಲಾದ ಸಾಧನ ಮತ್ತು ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಳ್ಳುಲು ಸ್ಥಳಕ್ಕೆ ಬಂದಾಗ ದೇವಸ್ಥಾನ ಅಧ್ಯಕ್ಷರಾದ ಕೃಷ್ಣ ನಾಯ್ಕ ಆಸರಕೇರಿ, ಪುರಸಭಾ ಸದಸ್ಯ ಶ್ರೀಕಾಂತ ನಾಯ್ಕ ಅವರು ಕೆಲವು ಹೊತ್ತು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ಭಟ್ಕಕದಲ್ಲಿರುವ ಹಲವು ಅಕ್ರಮ ಕಟ್ಟಡಗಳನ್ನು ಮೊದಲು ತೆರವು ಗೊಳಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ಮದ್ಯೆ ಪ್ರವೇಶಿಸಿ ತಾತ್ಕಾಲಿಕವಾಗಿ ಸಮಸ್ಯೆ ತಿಳಿಗೊಳಿಸಿ ಪುರಸಬೆ ವಾಹನದಲ್ಲಿ ಹಾಕಲಾದ ವಸ್ತುಗಳನ್ನು ಹಿಂತಿರುಗಿಸಿ. ನಿರ್ಮಾಣ ಹಂತದಲ್ಲಿರುವ ಪಿಲ್ಲರಗಳ ಬಳಿ ಡು ನೋಟ್‌ ವರ್ಕಪ್ರೊಗ್ರೆಸ್‌ ಮುದ್ರಿತ ರಿಬ್ಬನ್‌ಗಳನ್ನು ಎರಡು ಕಂಬಗಳ ಬಳಿ ಅಳವಡಿಸಿದರು. ನಂತರ ಸುಲ್ತಾನ ಸ್ಟ್ರೀಟ್‌ ಬಳಿ ಆಗಮಿಸಿ ಅಲ್ಲಿ ಹಾಕಾಗಿದ್ದ ಬೋರ್ಡನ್ನು ಪುರಸಭೆಯ ಕೆಲಸಗಾರರ ಸಹಾಯದಿಂದ ತೆರವು ಗೋಳಿಸಿ ಅಲ್ಲಿಯು ಸಹ ರಿಬ್ಬನ್‌ ಅನ್ನು ಅಳವಡಿಸಿ ಪೋಲಿಸ್‌ ವಾಹನ ನಿಯೋಜಸಿ ಬಿಗಿ ಭದ್ರತೆ ಒದಗಿಸಿದ್ದಾರೆ. ಜಿಲ್ಲೆಯ ಹಲವು ಭಾಗಗಳಿಂದ ಪೋಲಿಸರು ಮತ್ತು ಪೊಲೀಸ್ ಅಧಿಕಾರಿಗಳು ಭಟ್ಕಳಕ್ಕೆ ಭದ್ರತೆಗೆ ಆಗಮಿಸಿದ್ದು ಎರಡು ಪ್ರದೇಶಗಳಲ್ಲಿ ಪೋಲಿಸ್‌ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಒಟ್ಟಾರೆ ಭಟ್ಕಳದ ಸದ್ಯದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.

RELATED ARTICLES  ರೂಪಾಲಿ ನಾಯ್ಕ ಉ.ಕ ಜಿಲ್ಲಾ ಮಹಿಳಾ ಯುವ ಮೋರ್ಚಾ ಸಂಘಟನೆಯ ಹೊಣೆಗಾರಿಕೆ.

ಈ ಸಂದರ್ಭದಲ್ಲಿ ಪಿಆಯ್‌ ದಿವಾಕರ ಪಿ, ಪುರಸಭೆ ಮುಖ್ಯಾಧಿಕಾರಿ ಸುರೇಶ, ಭಟ್ಕಳದ ನಗರ ಠಾಣಾ ಪಿಎಸ್‌ ಆಯ್‌ ಸುಮಾ ಬಿ, ಗ್ರಾಮಿಣ ಪಿಎಸ್‌ ಆಯ್‌ ಭರತ್‌ , ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.