ಭಟ್ಕಳ : ತಾಲೂಕ ಸರ್ಪನಕಟ್ಟೆಯ ಪ್ರತಿಷ್ಟಿತ ಹಣಕಾಸು ಸಂಸ್ಥೆ ಮಹಾಗಣಪತಿ ಮಹಾಸತಿ ಸೌಹಾರ್ದ ಪತ್ರಿನ ಸಹಕಾರಿ ಸಂಘ ನಿಯಮಿತ ಇದರ 8 ನೆ ವರ್ಷದ ವಾರ್ಷಿಕ ಸರ್ವಸಾದಾರಣ ಸಭೆ ಸಂಘದ ಅಧ್ಯಕ್ಷ ಈರಪ್ಪ ಗರ್ಡಿಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು
ಈ ಸಂದರ್ಬದಲ್ಲಿ ಅವರು ಮಾತನಾಡಿ ನಮ್ಮ ಸಂಘ ಸಮಾಜ ಮುಖಿಯಾಗಿ ತನ್ನ ಕರ್ತವ್ಯವವನ್ನು ನಿರ್ವಹಿಸುತ್ತಿದ್ದು ಸಂಸ್ಥೆ 2014 ರಂದು ಪ್ರಾರಂಬವಾಗಿದ್ದು ಪ್ರಗತಿಯ ಪತದಲ್ಲಿ ಸಾಗುತ್ತಿದೆ ಸಹಕಾರಿಯ ಅ ಮತ್ತು ಡ ವರ್ಗದ ಒಟ್ಟೂ 3764 ಸದಸ್ಯರಿಂದ ರೂ 124.95 ಲಕ್ಷ ಶೇರು ಬಂಡವಾಳ ಹೊಂದಿದ್ದು ವರದಿ ವರ್ಷದಲ್ಲಿ 1623.01 ಲಕ್ಷ ಠೇವಣಿ ಹೊಂದಿದ್ದು ರೂ 1844.46 ಲಕ್ಷ ವಿವಿದ ರೀತಿಯ ಸಾಲಗಳನ್ನು ತನ್ನ ಸದಸ್ಯರಿಗೆ ಹಂಚಿಕೆ ಮಾಡಿರುತ್ತದೆ ದಿನಾಂಕ 31.03.2022ರ ಅಂತ್ಯಕ್ಕೆ ರೂ 127.82 ಲಕ್ಷ ನಿದಿಗಳನ್ನು ಹೊಂದಿದ್ದು ವರ್ಷಾಂತ್ಯಕ್ಕೆ ರೂ 105.92 ಲಕ್ಷ ಹೂಡಿಕೆ ಮಾಡಿದ್ದು ಇರುತ್ತದೆ ಸಹಕಾರಿಯು ವರದಿ ವರತಷದಲ್ಲಿ 13.85 ಲಕ್ಷ ಲಾಭಗಳಿಸಿದ್ದು ವರ್ಷಂಪ್ರತಿ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ ಒಟ್ಟಾರೆ ನಮ್ಮ ಸಂಸ್ಥೆ ಪ್ರಗತಿಯತ್ತ ಮುನ್ನುಗ್ಗುತ್ತಿದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಹಿಂದಿನ ವಾರ್ಷೀಕ ಸರ್ವಸಾದಾರಣ ಸಭೇಯ ನಡವಳಿಕೆಯನ್ನು ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕರಾದ ಕ್ರಷ್ಣ ಎಂ ನಾಯ್ಕ ಓದಿ ಹೇಳಿದರು ಕಾರ್ಯಕ್ರಮದ ಕೊನೆಯಲ್ಲಿ ಶಾಖೆಯ ವ್ಯವಸ್ಥಾಪಕ ವಿಶ್ವನಾಥ ನಾಯ್ಕ ವಂದಿಸಿದರು
ಈ ಸಂದರ್ಬದಲ್ಲಿ ಎಂ ಜಿ ಅರುಣ್ ಕುಮಾರ್ , ನಿರ್ದೆಶಕರುಗಳಾದ ಜ್ಯೋತಿ ನಾಯ್ಕ ,ಮಂಜುನಾಥ ನಾಯ್ಕ ಉದಯ ನಾಯ್ಕ ಸುರೇಶ ನಾಯ್ಕ ವಿಶ್ವನಾಥ ಶೇಟ್ಟಿ ಮಾದೇವ ನಾಯ್ಕ ಸವಿತಾ ನಾಯ್ಕ ಆಶಾ ನಾಯ್ಕ ನಾಗಪ್ಪ ನಾಯ್ಕ ಈಶ್ವರ ಮೊಗೇರ್ ನವನೀತ ನಾಯ್ಕ, ಜಗದೀಶ ನಾಯ್ಕ ಜಗದೀಶ ಗೊಂಡ ಉಪಸ್ಥಿತರಿದ್ದರು