ಅಂಕೋಲಾ:ಭಾರತೀಯ ಜನತಾ ಪಕ್ಷದ ರೈತ ಮೋರ್ಛಾ ಅಂಕೋಲಾ ಮಂಡಲ,ಶಕ್ತಿ ಕೇಂದ್ರ ಡೋಂಗ್ರಿ ಮತ್ತು ಹೆಗ್ಗಾರ ಬೂತ್ ಸಹಯೋಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಹಿರಿಯ ಪ್ರಾಥಮಿಕ ಶಾಲೆ ಹೆಗ್ಗಾರ, ಕಿರಿಯ ಪ್ರಾಥಮಿಕ ಶಾಲೆ ವೈದ್ಯ ಹೆಗ್ಗಾರ, ಹಿರಿಯ ಪ್ರಾಥಮಿಕ ಶಾಲೆ ಕಲ್ಲೇಶ್ವರ, ಪ್ರೌಢ ಶಾಲೆ ಕಲ್ಲೇಶ್ವರ ಮತ್ತು ಹೆಗ್ಗಾರ, ವೈದ್ಯ ಹೆಗ್ಗಾರ, ಕಲ್ಲೇಶ್ವರಗಳ ಅಂಗನವಾಡಿ ಕೇಂದ್ರಗಳ ವಿದ್ಯಾರ್ಥಿಗಳಿಗೆ ಪಟ್ಟಿ, ಪೆನ್ನು ಮತ್ತು ಸಿಹಿ ವಿತರಿಸಲಾಯಿತು.
ಜಿಲ್ಲಾ ರೈತ ಮೋರ್ಛಾ ಪ್ರಭಾರಿ ಗೋಪಾಲಕೃಷ್ಣ ವೈದ್ಯ, ತಾಲೂಕು ರೈತ ಮೋರ್ಛಾ ಅಧ್ಯಕ್ಷ ವಿ.ಎಸ್. ಭಟ್ಟ ಕಲ್ಲೇಶ್ವರ, ಜಿಲ್ಲಾ ರೈತ ಮೋರ್ಛಾ ಸದಸ್ಯ ಸುಧಾಕರ ಭಟ್ಟ, ಕೋನಾಳ, ಹಿರಿಯ ಶಿವರಾಮ ಭಟ್ಟ ಗುಡ್ಡೆ, ಶ್ರೀಧರ ವೈದ್ಯ, ಮಹಾಬಲೇಶ್ವರ ಭಟ್ಟ, ಸರ್ವೇಶ್ವರ ಹೆಗಡೆ, ದಯಾನಂದ ವೆರ್ಣೇಕರ ಮೊದಲಾದವರು ಪಾಲ್ಗೊಂಡು ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಿ ಸಿಹಿ ಹಂಚಿದರು.
ವಿವಿಧ ಶಾಲೆಗಳ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು,ಸದಸ್ಯರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರು ಉಪಸ್ಥಿತರಿದ್ದರು.

RELATED ARTICLES  ಅಗ್ನಿದುರಂತಕ್ಕೀಡಾದ ಮನೆಗೆ ತೆರಳಿ ಅರ್ಥಿಕ ಸಹಾಯದ ಚೆಕ್ ನೀಡಿದ ಮಂಕಾಳ ವೈದ್ಯ