ಹವ್ಯಕ ವಿದ್ಯಾವರ್ಧಕ ಸಂಘ ಕುಮಟಾದ ಅಧ್ಯಕ್ಷರಾದ ಶಂಕರಮೂರ್ತಿ ಶ್ರೀಪಾದ ಶಾಸ್ತ್ರಿ ಇವರ ಅನಿರೀಕ್ಷಿತ,ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಡಾ. ಶ್ರೀಕಾಂತ ಹೆಗಡೆ ಕಾಗಾಲಮಾನೀರ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೈಕ್ರೊಬಯಾಲಜಿಯಲ್ಲಿ ಡಾಕ್ಟರೇಟ್ ಪಡೆದ ಇವರು ಎರಡು ದಶಕಕ್ಕೂ ಹೆಚ್ಚು ಕಾಲ ಅಮೇರಿಕಾದಲ್ಲಿ ಸಂಶೋಧನಾ ಸೇವೆಸಲ್ಲಿಸಿ ಈಗ ಕುಮಟಾದಲ್ಲಿ ಸ್ವಂತ ಸಂಶೋಧನಾ ಕೇಂದ್ರದಲ್ಲಿ ಸಂಶೋಧನ ಮುಂದುವರಿಸಿದ್ದಾರೆ.

RELATED ARTICLES  ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ: ನಮ್ಮ ಮಂಕಾಳ ವೈದ್ಯರು.

ಹಲವಾರು ವಿಶ್ವವಿದ್ಯಾಲಯ,ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ವೈಜ್ಞಾನಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ ಇವರು ಸಾಮಾಜಿಕ,ಕೃಷಿ ಹಾಗೂ ಪರಿಸರ ಜಾಗೃತಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಇವರ ಸಮರ್ಥ ನಾಯಕತ್ವದಲ್ಲಿ ಸಂಘ ಹೆಚ್ಚಿನ ಸಾಧನೆ,ಸೇವೆ ಮತ್ತು ಯಶಸ್ಸನ್ನು ಹೊಂದಲಿ ಎಂದು ಎಲ್ಲ ಸದಸ್ಯರು ಹಾರೈಸಿದ್ದಾರೆ.

RELATED ARTICLES  ಕಂಟೇನರ್ ಹಾಗೂ ಕಲ್ಲು ಲಾರಿ ಮತ್ತು ಪ್ಯಾಸಂಜರ್ ಟ್ಯಾಂಪೋ ನಡುವೆ ಮಂಕಿ ಬಳಿ ಭೀಕರ ಅಪಘಾತ!