ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಅರಬೈಲ್ ಘಟ್ಟದಲ್ಲಿ ಯೂಟರ್ನ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಪ್ರಪಾತಕ್ಕೆ ಬಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದಿಂದ ಮಂಗಳೂರಿನ ಕಡೆಗೆ ಗ್ರಾನೈಟ್ ತುಂಬಿಕೊಂಡು ಹೋಗುತ್ತಿದ್ದ ಲಾರಿ, ಅರಬೈಲ್ ಘಟ್ಟದಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದು, ಮರಕ್ಕೆ ಡಿಕ್ಕಿ ಹೊಡೆದು,100 ಅಡಿಗಿಂತ ಹೆಚ್ಚು ಆಳದ ಪ್ರಪಾತಕ್ಕೆ ಉರುಳಿದೆ. ಗ್ರಾನೈಟ್ ಹಾಗೂ ಸಂಪೂರ್ಣ ಪುಡಿ ಪುಡಿಯಾಗಿದೆ ಎನ್ನಲಾಗಿದೆ.
ಲಾರಿಯ ಚಾಲಕ ಹಾಗೂ ನಿರ್ವಾಹಕರು
ಮೃತಪಟ್ಟಿದ್ದು, ಇಬ್ಬರ ದೇಹಗಳು ಗುರುತು ಸಿಗದ ರೀತಿಯಲ್ಲಿ ಛಿದ್ರ ಛಿದ್ರವಾಗಿದೆ. ಕಂದಕಕ್ಕೆ ಉರುಳಿದ ಲಾರಿ ಹಾಗೂ ಮೃತದೇಹಗಳನ್ನು ಮೇಲಕ್ಕೆತ್ತುವುದು ಕಷ್ಟಕರವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.