ಸಿದ್ದಾಪುರ : ಉತ್ತರ ಕನ್ನಡದಲ್ಲಿ ಒಂದೆಲೊಂದು ರೀತಿಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಮದ್ಯಸೇವನೆ ಮಾಡದಂತೆ ತಾಯಿ ಬುದ್ದಿವಾದ ಹೇಳಿದಕ್ಕೆ ಮನನೊಂದು ಮಗ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೊನ್ನೆಗದ್ದೆ ಗ್ರಾಮದಲ್ಲಿ ನಡೆದಿದೆ.
ಕುಡಿತದ ಚಟ ಏನೆಲ್ಲಾ ಸಮಸ್ಯೆಗಳಿಗೆ ಕಾರಣವಾಗಬಹುದು? ಹಾಗೂ ಕುಡಿತದ ದಾಸರಾದವರು ಯಾವೆಲ್ಲಾ ರೀತಿಯಲ್ಲಿ ಸಮಸ್ಯೆ ಮಾಡಿಕೊಳ್ಳಬಹುದು. ಎನ್ನುವುದಕ್ಕೆ ತಾಜಾ ಉದಾಹರಣೆ ಇದು ಎನ್ನಲಾಗಿದೆ.
ನಾಗೇಂದ್ರ ಈಶ್ವರ ಚನ್ನಯ್ಯ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು ,ವಿಪರೀತ ಮದ್ಯಸೇವನೆಗೆ ಒಳಗಾಗಿದ್ದ ಯುವಕ ನಿಗೆ ತಾಯಿ ಪ್ರತಿದಿನ ಮದ್ಯ ಸೇವಿಸದಂತೆ ಬುದ್ದಿವಾದ ಹೇಳಿದ್ದರು. ಆದರೇ ಇದನ್ನು ಕೇಳದ ಈತ ಪ್ರತಿ ದಿನ ಮದ್ಯ ಸೇವಿಸುತಿದ್ದ. ತಾಯಿ ಮತ್ತೆ ಬುದ್ದಿವಾದ ಹೇಳಿದ್ದಕ್ಕೆ ಮದ್ಯ ಬಿಡಲಾಗದೇ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದು, ಪ್ರಕರಣ ದಾಖಲಾಗಿದೆ.