ಕುಮಟಾ : ವಿಶ್ವದರ್ಶನ ಪ್ರಥಮ ಸಮ್ಮೇಳನವು ಧಾರವಾಡದ ರಂಗಾಯಣದಲ್ಲಿ ಸೆ. 22ರಂದು ನಡೆಯಲಿದ್ದು, ಪತ್ರಿಕೋದ್ಯಮದಲ್ಲಿ ಹಲವಾರು ವರ್ಷಗಳಿಂದ ಸಲ್ಲಿಸುತ್ತಿರುವ ಸಾರ್ಥಕ ಸೇವೆಗಾಗಿ ವಿಜಯಶಾಲಿ ವಾರ ಪತ್ರಿಕೆಯ ಸಂಪಾದಕ ಶ್ರೀ ಸದಾನಂದ ದೇಶಭಂಡಾರಿ ಅವರಿಗೆ “ವಿಶ್ವ ಮಾಧ್ಯಮ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು
ಸಂಘಟಕ, ವಿಶ್ವದರ್ಶನ ದೈನಿಕ ಸಂಪಾದಕ ಡಾ. ಎಸ್. ಎಸ್. ಪಾಟೀಲ ಪ್ರಕಟಿಸಿದ್ದಾರೆ.
ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ (ಬಿ.ಎ./ಪಿ.ಜಿ. ಡಿಪ್ಲೋಮಾ ಇನ್ ಜರ್ನಲಿಸಂ) ಪಡೆದಿರುವ ಶ್ರೀಯುತ ಸದಾನಂದ ದೇಶಭಂಡಾರಿಯವರು ಕಡಲವಾಣಿ ದಿನಪತ್ರಿಕೆಯ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ನಂತರ ಜನಮಾಧ್ಯಮ ದಿನಪತ್ರಿಕೆಯ ವರದಿಗಾರರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ನಂತರದಲ್ಲಿ ವಿಜಯವಾಣಿ ಪತ್ರಿಕೆಯ ವರದಿಗಾರರಾಗಿ, ಪತ್ರಿಕಾ ವಿತರಕರಾಗಿ ಕುಮಟಾದಲ್ಲಿ 3500ಕ್ಕೂ ಹೆಚ್ಚು ಓದುಗರನ್ನು ಸೃಷ್ಟಿಸುವ ಮೂಲಕ ಇತಿಹಾಸ ಬರೆದರು.
ಈ ಸಂದರ್ಭದಲ್ಲಿ ಸಾಕಷ್ಟು ಜನಪರ ವರದಿಗಳನ್ನು ನೀಡುವ ಮೂಲಕ ಪತ್ರಿಕೋದ್ಯಮ ರಂಗದಲ್ಲಿ ಹೊಸ
ಭಾಷ್ಯ ಬರೆದರು. ನಂತರ ಕನ್ನಡಪ್ರಭ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆ ಗಳಿಸಿದರು. ಕಳೆದ ಆರು ವರ್ಷದಿಂದ ತಮ್ಮದೆ ಒಡೆತನದ “ವಿಜಯಶಾಲಿ”ವಾರ ಪತ್ರಿಕೆಯನ್ನು ವರ್ಣಮಯವಾಗಿ ಪ್ರಕಟಿಸಿ ಸಾವಿರಕ್ಕೂ ಹೆಚ್ಚು ಜನಪರ ವರದಿಗಳನ್ನು ಪ್ರಕಟಿಸುವ ಮೂಲಕ ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದಾರೆ.ಇತ್ತೀಚಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ಉತ್ತರಕನ್ನಡ ಜಿಲ್ಲಾಧ್ಯಕ್ಸರಾಗಿಯು ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ ಎಂಟು ತಿಂಗಳ ಹಿಂದೆ ಶಿಕ್ಷಕ, ವಾಗ್ಮಿ, ಹವ್ಯಾಸಿ ಯಕ್ಷಗಾನ ಕಲಾವಿದ, ಲೇಖಕ ಶ್ರೀ ಮುಂಜುನಾಥ ಗಾಂವಕರ ಬರ್ಗಿಯವರbಸಹಕಾರದೊಂದಿಗೆ *“ಕುಮಟಾ ಕನ್ನಡ ಸಂಘ” ವನ್ನು ಹುಟ್ಟು ಹಾಕಿ ಸಂಸ್ಥಾಪಕ ಅಧ್ಯಕ್ಷರಾಗಿ 20ಕ್ಕೂ ಹೆಚ್ಚು ಜನಮೆಚ್ಚುವ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಕನ್ನಡ ಭಾಷೆಯ ಅಭ್ಯುದಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಕುಮಟಾ ಕನ್ನಡ ಸಂಘದ ಮೂಲಕ ನಾಡು, ನುಡಿಯ ಕುರಿತ ಕಾರ್ಯ ಮಾಡುತ್ತಿರುವ ಅವರ ಅನುಪಮ ಸೇವೆಯನ್ನು ಗುರುತಿಸಿ ಧಾರವಾಡದ ರಂಗಾಯಣದಲ್ಲಿ ಸೆ. 22ರಂದು, ಸೋಮವಾರ, ನಾಡಿನ ಜಗದ್ಗುರುಗಳಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.