ಇತ್ತೀಚಿಗೆ ನಡೆದ ಹೊನ್ನಾವರ ತಾಲೂಕಾ ಸಮೂಹ ಸಂಪನ್ಮೂಲ ಕೇಂದ್ರ ಉಪ್ಪೋಣಿಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆಯ ವಿದ್ಯಾರ್ಥಿಗಳು 4 ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ತಾಲೂಕ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿರುತ್ತಾರೆ. ಅದರಂತೆ 7 ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ, 4 ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.

ಶಾಲೆಯಿಂದ 11 ವಿದ್ಯಾರ್ಥಿಗಳು 19 ಸ್ಪರ್ದೆಗಳಲ್ಲಿ ಭಾಗವಹಿಸಿ 15 ರಲ್ಲಿ ಬಹುಮಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಕಿರಿಯರ ವಿಭಾಗದಲ್ಲಿ 1)ಅಶ್ವಿಕ್ ರಾಮಚಂದ್ರ ನಾಯ್ಕ ಆಶುಭಾಷಣ ಸ್ಪರ್ಧೆ ಪ್ರಥಮ, ಛದ್ಮವೇಷ ಸ್ಪರ್ಧೆ ದ್ವಿತೀಯ, 2) ವಿಶ್ವನಾಥ್ ಗಣಪತಿ ನಾಯ್ಕ ಕನ್ನಡ ಕಂಠಪಾಠ ಪ್ರಥಮ, ಸಂಸ್ಕೃತ ಧಾರ್ಮಿಕ ಪಠಣ ದ್ವಿತೀಯ 3) ಭೂಮಿಕಾ ಚೇತನ್ ನಾಯ್ಕ ಕಥೆ ಹೇಳುವುದು ಪ್ರಥಮ, ಇಂಗ್ಲಿಷ್ ಕಂಠಪಾಠ ದ್ವಿತೀಯ, 4) ಲಾವಣ್ಯ ಪುರ್ಸು ಮರಾಠಿ ಅಭಿನಯ ಗೀತೆಯ ದ್ವಿತೀಯ, ಭಕ್ತಿಗೀತೆ ತೃತೀಯ, 5) ನಂದನ್ ಗಣೇಶ್ ನಾಯ್ಕ ಮಣ್ಣಿನ ಮಾದರಿ ತಯಾರಿಕೆ ತೃತೀಯ ಬಹುಮಾನ ಪಡೆಯುವ ಮೂಲಕ ಕಿರಿಯರ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ.

RELATED ARTICLES  ಅಪಘಾತ : ಯಕ್ಷಗಾನ ಭಾಗವತ ಧಾರುಣ ಸಾವು.

ಹಿರಿಯರ ವಿಭಾಗದಲ್ಲಿ 1)ದೀಕ್ಷಾ ಭುವನೇಶ್ವರ ನಾಯ್ಕ ಧಾರ್ಮಿಕ ಪಠಣ ಪ್ರಥಮ, ಕಥೆ ಹೇಳುವುದು ದ್ವಿತೀಯ, 2) ಧನುಷ್ ಕೇಶವ್ ಗೌಡ ಹಾಸ್ಯ ದ್ವಿತೀಯ, ಆಶುಭಾಷಣ ತೃತೀಯ, 3) ಶ್ವೇತಾ ಸತೀಶ್ ನಾಯ್ಕ ಭಕ್ತಿಗೀತೆ ದ್ವಿತೀಯ 4) ಗೌರವಿ ಧರ್ಮ ಮರಾಠಿ ಇಂಗ್ಲಿಷ್ ಕಂಠಪಾಠ ತೃತೀಯ ಬಹುಮಾನ ಪಡೆಯುವ ಮೂಲಕ ಹಿರಿಯರ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ. ಶಿಕ್ಷಕರಾದ ಶೋಭಾ ಶಾನಭಾಗ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು .ಬಹುಮಾನ ಪಡೆದ ಎಲ್ಲಾ ಮುದ್ದು ಪುಟಾಣಿಗಳ ಸಾಧನೆಗೆ ಶಾಲೆಯ ಪ್ರಭಾರೆ ಮುಖ್ಯ ಶಿಕ್ಷಕರಾದ ಸುಬ್ರಾಯ ಶಾನಭಾಗ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೇಶವ ನಾರಾಯಣ ಗೌಡ, ಉಪ್ಪೋಣಿ ಗ್ರಾಮ ಪಂಚಾಯತ್ ಸದಸ್ಯರಾದ ಮಂಜುನಾಥ್ ಕೃಷ್ಣ ಗೌಡ, ಎಸ್ ಡಿ ಎಂ ಸಿ ಸದಸ್ಯರು ,ಪಾಲಕ- ಪೋಷಕರು, ಪೂರ್ವ ವಿದ್ಯಾರ್ಥಿಗಳು, ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

RELATED ARTICLES  ಕಾನೂನು ಮತ್ತು ಸರಕಾರದ ನಡವಳಿಕೆಗೆ ವ್ಯತಿರಿಕ್ತವಾಗಿ ನೋಟಿಸ್ ; ಅತಿಕ್ರಮಣದಾರರನ್ನ ಒಕ್ಕಲೆಬ್ಬಿಸುವ ಕಾನೂನು ಪ್ರಕ್ರೀಯೆಗೆ ಖಂಡನೆ- ರವೀಂದ್ರ ನಾಯ್ಕ.