ಹೊನ್ನಾವರ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ವ್ಯಕ್ತಿಯೋರ್ವ ಅವಹೇಳನಕಾರಿಯಾಗಿ ಕಮೆಂಟ್ ಹಾಕಿದ್ದ ಹಿನ್ನೆಲೆಯಲ್ಲಿ ಆತನ ವಿರುದ್ಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವಹೇಳನಕಾರಿ ಕಮೆಂಟ್ ಮಾಡಿದ ಆರೋಪದಲ್ಲಿ ಗಣೇಶ ಗೌಡ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಸೆ.15ರಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕಿ ರೂಪಾಲಿ ನಾಯ್ಕ ಕಲಾಪದಲ್ಲಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವಿಷಯ ಪ್ರಸ್ತಾಪಿಸಿದ್ದು, ಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅದಕ್ಕೆ ಪ್ರತಿಕ್ರಿಯಿಸುತ್ತಿದ್ದರು.

ಈ ಸಂದರ್ಭದಲ್ಲಿನ ಸ೦ಭಾಷಣೆಯನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಪೋಸ್ಟ್‌ಗೆ ಆರೋಪಿ ಗಣೇಶ ವೈಯಕ್ತಿಕ ಫೇಸ್‌ಬುಕ್ ಖಾತೆಯಿಂದ ಅವಹೇಳನಕಾರಿ ಕಮೆ೦ಟ್ ಹಾಕಿ, ಸ್ಪೀಕರ್‌ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ಆರೋಪಿಸಿ ತಾಲೂಕಿನ ಹೊಸಾಕುಳಿಯ ವಸಂತ ಈಶ್ವರ ನಾಯ್ಕ ದೂರು ನೀಡಿದ್ದಾರೆ.

RELATED ARTICLES  ಹೆಡೆ ಎತ್ತಿ ನಿಂತು ರಸ್ತೆ ಸಂಚಾರ ತಡೆದ ಕಾಳಿಂಗ! ಭಯಗೊಂಡ ಜನತೆ

ಜಿಲ್ಲೆಯ ಸಾಮಾಜಿಕ ಜಾಲತಾಣವೊಂದರಲ್ಲಿ ಬಂದ
ಕಾಮೆಂಟ್‌ನಲ್ಲಿ ಅಗೌರವದ ಶಬ್ದ ಬಳಸಿ ಟೀಕೆಮಾಡಿ ಉದ್ರೇಕಿಸಿದ ಮತ್ತು ಇದಕ್ಕೆ ಕಾಮೆಂಟ್ ಹಾಕಿದ ವ್ಯಕ್ತಿ ಕಾಗೇರಿಗೆ…..ನಲ್ಲಿ ಹೊಡೆಯಬೇಕು? ಎಂದು ಕಾಮೆಂಟ್ ಹಾಕಿದ್ದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು ಈ ಕುರಿತು ಸಾಮಾಜಿಕ ಕಾರ್ಯಕರ್ತ ಹೊಸಾಕುಳಿಯ ವಸಂತ ಈಶ್ವರ ನಾಯ್ಕ ಎಂಬವರು ಸಾಮಾಜಿಕ ಜಾಲತಾಣದ ಎಡ್ಡಿನ್ ಮೇಲೆ ಮತ್ತು ಅವಹೇಳನಕಾರಿ ಕಾಮೆಂಟ್ ಹಾಕಿದವರ ಮೇಲೆ
ದೂರು ನೀಡಿದ್ದರು.

RELATED ARTICLES  ಅಕಾಲಿಕವಾಗಿ ನಿಧನರಾದ ಗ್ರಾ.ಪಂ. ಅಧ್ಯಕ್ಷೆ ನಾಗರತ್ನಾ ನಾಯ್ಕ.

ಪೊಲೀಸರು ತಕ್ಷಣ ಕಲಂ 107, 151 ಸಿಆರ್‌ಪಿಸಿ ಅನ್ವಯ ಎನ್.ಸಿ. ನಂ. 294/2022 ದಿನಾಂಕ 16-9-2022 ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಅಗತ್ಯಬಿದ್ದರೆ ಇದಕ್ಕೆ ಸಂಬಂಧಿಸಿದ ಇತರರ ಮೇಲೂ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಿಪಿಐ ಹೇಳಿದ್ದಾರೆ.